ಈ ಗ್ರಾಮದ ಹೆಸರು ಕೊರೌನಾ…ಇಲ್ಲಿ ಜನರ ಪಾಡು ಈಗ ಹೇಗಾಗಿದೆ ಗೊತ್ತಾ..?

masthmagaa.com:

ಉತ್ತರ ಪ್ರದೇಶ: ಕೊರೋನಾ ವೈರಸ್ ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿದ್ದು, ಭಾರತ ಕೂಡ ಲಾಕ್ ಡೌನ್ ಆಗಿದೆ. ಈ ನಡುವೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಗ್ರಾಮವೊಂದರ ಜನ ವೈರಸ್ ಹರಡದೇ ಇದ್ದರು ಕಂಗಾಲಾಗಿ ಹೋಗಿದ್ದಾರೆ. ಯಾಕಂದ್ರೆ ಈ ಗ್ರಾಮದ ಹೆಸರೇ ಕೊರೌನಾ… ಇದ್ರಿಂದಾಗಿ ಇವರು ತುಂಬಾ ತಾರತಮ್ಯವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಮಾತನಾಡಿದ ಗ್ರಾಮಸ್ಥರು, ನಾವು ಗ್ರಾಮದಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಜನ ಭಯಭೀತರಾಗಿದ್ದಾರೆ. ನಾವು ಕೊರೌನಾದವರು ಎಂದು ಹೇಳಿದ್ರೆ ಹೊರಗಿನ ಜನ ನಮ್ಮನ್ನು ನಿರ್ಲಕ್ಷ್ಯ ಮಾಡ್ತಿದ್ದಾರೆ. ಇದೂ ಕೂಡ ಒಂದು ಗ್ರಾಮ ಅಷ್ಟೆ.. ಇಲ್ಲಿ ಯಾರೂ ಕೊರೋನಾ ಪೀಡಿತರು ಇಲ್ಲ ಅನ್ನೋದು ಅವರಿಗೆ ಅರ್ಥವಾಗುತ್ತಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ.

ನಾವು ರಸ್ತೆಯಲ್ಲಿ ಹೋಗುವಾಗ ಎಲ್ಲಿಗೆ ಅಂತ ಪೊಲೀಸರು ಪ್ರಶ್ನಿಸಿದಾಗ ನಾವು ಕೊರೌನಾಗೆ ಹೊರಟಿದ್ದೇವೆ ಎಂದು ಹೇಳಿದ್ರೆ ಒಂಥರಾ ಕೀಳಾಗಿ ನೋಡ್ತಾರೆ. ನಮ್ಮ ಗ್ರಾಮದ ಹೆಸರೇ ಕೊರೌನಾ ಅಂತ ಇರುವಾಗ ನಾವು ಏನು ಮಾಡಲು ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಂದ್ವೇಳೆ ನಾವು ಸರ್ಕಾರಿ ಸಹಾಯವಾಣಿ ಅಥವಾ ಕಸ್ಟಮರ್​​ಕೇರ್​​ಗೆ ಕರೆ ಮಾಡಿ, ನಾವು ಕೊರೌನಾದಿಂದ ಕರೆ ಮಾಡಿದ್ದೇವೆ ಎಂದು ಹೇಳಿದ್ರೆ, ಯಾರೋ ತಮಾಷೆ ಮಾಡ್ತಿದ್ದಾರೆ ಎಂದು ಭಾವಿಸಿ ಕರೆ ಕಟ್ ಮಾಡ್ತಿದ್ದಾರೆ. ಹೀಗಾಗಿ ನಾವು ಏನು ಮಾಡಬೇಕೋ ಅಂತ ದಿಕ್ಕೇ ತೋಚುತ್ತಿಲ್ಲ ಎಂದು ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡಿದ್ದಾರೆ.

-masthmagaa.com

 

Contact Us for Advertisement

Leave a Reply