ಕೊರೋನಾದಿಂದ ಗುಣಮುಖರಾದವರಲ್ಲಿ ಮತ್ತೆ ಕೊರೋನಾ..! ಆಸ್ಪತ್ರೆಗೆ ದಾಖಲು

masthmagaa.com:

ಉತ್ತರ ಪ್ರದೇಶ: ನೋಯ್ಡಾದಲ್ಲಿ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದ ಇಬ್ಬರು ರೋಗಿಗಳು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೋನಾದಿಂದ ಬಳಲುತ್ತಿದ್ದ ಇಬ್ಬರು, ನೋಯ್ಡಾದ ಗಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ನೀಡಿದ ಬಳಿಕ ಇಬ್ಬರೂ ಗುಣಮುಖರಾಗಿದ್ದರು. ಎರಡೆರಡು ಬಾರಿ ನಡೆಸಿದ ಪರೀಕ್ಷೆಯಲ್ಲಿ ಕೊರೋನಾ ಇಲ್ಲ ಎಂದು ರಿಪೋರ್ಟ್ ಬಂದಿತ್ತು. ಹೀಗಾಗಿ ಇವರನ್ನು ಕಳೆದ ಶುಕ್ರವಾರ ಡಿಸ್ಚಾರ್ಜ್ ಮಾಡಲಾಗಿತ್ತು. ಡಿಸ್ಚಾರ್ಜ್ ವೇಳೆ ಮತ್ತೊಮ್ಮೆ ಪರೀಕ್ಷೆ ನಡೆಸಲು ಸ್ಯಾಂಪಲ್ ಪಡೆಯಲಾಗಿತ್ತು. ಈ ಪರೀಕ್ಷೆಯ  ವರದಿಯಲ್ಲಿ ಕೊರೋನಾ ಇರೋದು ದೃಢವಾಗಿದೆ. ಹೀಗಾಗಿ ಇಬ್ಬರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಈವರೆಗೆ 483 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ನೋಯ್ಡಾ ಇರುವ ಗೌತಮ್ ಬುದ್ಧನಗರ ಜಿಲ್ಲೆಯಲ್ಲೇ ಪತ್ತೆಯಾಗಿವೆ. ಹೀಗಾಗಿ ಜಿಲ್ಲೆಯ ಹಲವು ಪ್ರದೇಶಗಳನ್ನು ಕಂಪ್ಲೀಟ್ ಸೀಲ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply