ಕೊರೋನಾದಿಂದ ರಕ್ಷಣೆ ನೀಡಲಿದೆ ಅಮೆರಿಕದ ಲಸಿಕೆ: ಕಂಪನಿಯಿಂದ ಘೋಷಣೆ

masthmagaa.com:

ಕೊರೋನಾ ವೈರಸ್​ಗೆ ಅಮೆರಿಕದ ‘ಫೈಝರ್’ (Pfizer) ಮತ್ತು ಜರ್ಮನಿಯ ‘ಬಯೋನ್​ಟೆಕ್’ (BioNTech) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆ (BNT162b2) ವೈರಾಣುವಿನಿಂದ ರಕ್ಷಣೆ ನೀಡಲು 90%ಗೂ ಹೆಚ್ಚು ಪರಿಣಾಮಕಾರಿಯಾಗಿದೆ ಅಂತ ಕಂಪನಿ ಘೋಷಿಸಿದೆ. ಅಂದ್ಹಾಗೆ ಈ ಲಸಿಕೆಯ ಮೂರನೇ ಮತ್ತು ಕೊನೇ ಹಂತದ ಮಾನವ ಪ್ರಯೋಗ ಜುಲೈ 27ರಿಂದ ಆರಂಭವಾಗಿತ್ತು. ಇದುವರೆಗೆ 43,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ಲಸಿಕೆ ಹಾಕಲಾಗಿದೆ. ಈ ಪೈಕಿ 38,000 ಸ್ವಯಂ ಸೇವಕರು ಎರಡನೇ ಡೋಸ್​ ಕೂಡ ಪಡೆದಿದ್ದಾರೆ. ಎರಡನೇ ಡೋಸ್​ ಪಡೆದ 7 ದಿನದಲ್ಲಿ ಮತ್ತು ಮೊದಲ ಡೋಸ್​ ಪಡೆದ 28 ದಿನಗಳಲ್ಲಿ ಸ್ವಯಂ ಸೇವಕರ ದೇಹದಲ್ಲಿ ಕೊರೋನಾ ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆ ರೂಪುಗೊಂಡಿದೆ ಅಂತ ಕಂಪನಿ ಹೇಳಿದೆ.

ಇದರ ಬೆನ್ನಲ್ಲೇ ಫೈಝರ್ ಕಂಪನಿಯ ಅಧ್ಯಕ್ಷ ಡಾ. ಆಲ್ಬರ್ಟ್​ ಬೌರ್ಲ ಮಾತನಾಡಿ, ‘ಇವತ್ತು ವಿಜ್ಞಾನ ಮತ್ತು ಮನುಕುಲಕ್ಕೆ ದೊಡ್ಡ ದಿನವಾಗಿದೆ. ಈ ಲಸಿಕೆಯ ಮೂರನೇ ಹಂತದ ಮಾನವ ಪ್ರಯೋಗದ ಪ್ರಾಥಮಿಕ ಫಲಿತಾಂಶ ಬಂದಿದೆ. ಅದರಲ್ಲಿ ಈ ಲಸಿಕೆಯು ಕೊರೋನಾ ವಿರುದ್ಧ ರಕ್ಷಣೆ ನೀಡಲಿದೆ ಅನ್ನೋದಕ್ಕೆ ಸಾಕ್ಷ್ಯ ಸಿಕ್ಕಿದೆ’ ಅಂತ ಹೇಳಿದ್ದಾರೆ. ಜೊತೆಗೆ ಈ ವರ್ಷದಲ್ಲಿ 5 ಕೋಟಿ ಡೋಸ್​ಗಳನ್ನ ಮತ್ತು 2021ರಲ್ಲಿ 130 ಕೋಟಿ ಡೋಸ್​ಗಳನ್ನ ಉತ್ಪಾದನೆ ಮಾಡುವ ಗುರಿ ಹೊಂದಿದ್ದೇವೆ ಅಂತ ಹೇಳಿದ್ದಾರೆ. ಈ ಗುಡ್​ ನ್ಯೂಸ್ ಬೆನ್ನಲ್ಲೇ ಗ್ಲೋಬಲ್​ ಸ್ಟಾಕ್ ಮಾರ್ಕೆಟ್ ಮೇಲಕ್ಕೆದ್ದಿದೆ.

-masthmagaa.com

Contact Us for Advertisement

Leave a Reply