masthmagaa.com:

ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿರುವ ದೆಹಲಿಯ ಆಪ್​ ಸರ್ಕಾರ ಬ್ಯಾಟರಿ ಚಾಲಿತ ವಾಹನಗಳಿಗೆ ರೋಡ್​ ಟ್ಯಾಕ್ಸ್​ನಿಂದ ವಿನಾಯ್ತಿ ನೀಡಿದೆ. ಇದನ್ನ ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಘೋಷಿಸಿದ್ದಾರೆ.

ಆಗಸ್ಟ್​ನಲ್ಲಿ ಕೇಜ್ರಿವಾಲ್​ ಸರ್ಕಾರ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿಯನ್ನ ಘೋಷಿಸಿತ್ತು. ಇದರ ಪ್ರಕಾರ ಬ್ಯಾಟರಿ ಚಾಲಿತ ಹೊಸ ವಾಹನಗಳಿಗೆ ರೆಜಿಸ್ಟ್ರೇಷನ್ ಫೀಸ್, ರೋಡ್ ಟ್ಯಾಕ್ಸ್​ನಿಂದ ವಿನಾಯ್ತಿ ನೀಡುವುದರ ಜೊತೆಗೆ ಒಂದೂವರೆ ಲಕ್ಷ ರೂಪಾಯಿಯಷ್ಟು ಪ್ರೋತ್ಸಾಹಧನ ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ಈಗ ರಸ್ತೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ.

-masthmagaa.com

Contact Us for Advertisement

Leave a Reply