ಅಮೆರಿಕ, ಚೀನಾ ಹಿಂದಿಕ್ಕಿದ ಭಾರತ..! ಕೊರೋನಾ ನಿಯಂತ್ರಣದಲ್ಲಿ 2ನೇ ಸ್ಥಾನ..!

masthmagaa.com:

ಭಾರತದಲ್ಲಿ 18 ಸಾವಿರ ಕೊರೋನಾ ವೈರಸ್ ಪೀಡಿತರು ಪತ್ತೆಯಾಗಿದ್ದಾರೆ. ಕಳೆದ ದಿನಗಳಲ್ಲಿ 4 ಲಕ್ಷಕ್ಕೂ ಅಧಿಕ ಜನರ ಟೆಸ್ಟಿಂಗ್ ನಡೆದಿದೆ. ಟೆಸ್ಟ್​ ಪಾಸಿಟಿವಿಟಿ ರೇಟ್​​​​ ಗಮನಿಸಿದ್ರೆ ಭಾರತ ಕೊರೋನಾ ವೈರಸ್​​ನ್ನು ನಿಯಂತ್ರಿಸಿದೆ ಅನ್ನೋ ವಿಚಾರ ಗೊತ್ತಾಗುತ್ತೆ.

ಐಸಿಎಂಆರ್ ಪ್ರಕಾರ ದೇಶದಲ್ಲಿ ಕೊರೋನಾ ಪರೀಕ್ಷೆಗೆ ಒಳಪಟ್ಟ 23 ಜನರಲ್ಲಿ ಒಬ್ಬರಿಗೆ ಕೊರೋನಾ ಇರೋದು ಪತ್ತೆಯಾಗ್ತಿದೆ. ಉಳಿದ 22 ಮಂದಿಯ ವರದಿ ನೆಗೆಟಿವ್ ಬರುತ್ತಿದೆ. ಅಂದ್ರೆ ಟೆಸ್ಟ್​ ಪಾಸಿಟಿವಿಟಿ ರೇಟ್ ಶೇ.4ರಷ್ಟಿದೆ. ಇದು ಜಗತ್ತಿನ ಕೊರೋನಾ ಪೀಡಿತ ದೇಶಗಳಿಗೆ ಹೋಲಿಸಿದ್ರೆ ತುಂಬಾ ಕಡಿಮೆ ಪ್ರಮಾಣವಾಗಿದೆ. ಆದ್ರೆ ದಕ್ಷಿಣ ಕೊರಿಯಾದಲ್ಲಿ ಟೆಸ್ಟ್​ ಪಾಸಿಟಿವಿಟಿ ರೇಟ್​​ ಶೇ.1.9ರಷ್ಟಿದ್ದು, ಕೊರೋನಾ ನಿಯಂತ್ರಿಸಿದ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಇನ್ನುಳಿದಂತೆ ಬ್ರೆಜಿಲ್‌  ಶೇ. 6.4, ಜರ್ಮನಿ ಶೇ. 7.7, ಜಪಾನ್ ಶೇ. 8.8, ಇಟಲಿ ಶೇ. 13.2, ಸ್ಪೇನ್ ಶೇ. 18.2, ಅಮೆರಿಕ ಶೇ. 19.3ರಷ್ಟು ಟೆಸ್ಟ್​ ಪಾಸಿಟಿವಿಟಿ ರೇಟ್ ಹೊಂದಿವೆ.

-masthmagaa.com

Contact Us for Advertisement

Leave a Reply