masthmagaa.com:

ಐಎಂಎ ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಬೆಂಗಳೂರಿನ ಶಿವಾಜಿನಗರ ಕ್ಷೇತ್ರದ ಮಾಜಿ ಶಾಸಕ ರೋಷನ್ ಬೇಗ್​ ಅವರನ್ನ ಸಿಬಿಐ ಅರೆಸ್ಟ್ ಮಾಡಿದೆ. ಭಾನುವಾರ ಬೆಳಗ್ಗೆಯೇ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ರಾತ್ರಿ 8 ಗಂಟೆ ಸುಮಾರಿಗೆ ಅರೆಸ್ಟ್ ಮಾಡಿದ್ರು. ಬಳಿಕ ಅವರನ್ನ ಸಿಬಿಐ ವಿಶೇಷ ಕೋರ್ಟ್​ ಮುಂದೆ ಹಾಜರುಪಡಿಸಲಾಯ್ತು. ಈ ವೇಳೆ ಕೋರ್ಟ್​ ರೋಷನ್​ ಬೇಗ್​ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡ್ತು.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮನ್ಸೂರ್ ಖಾನ್ ಈ ಹಿಂದೆ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ರೋಷನ್​ ಬೇಗ್​ಗೆ 400 ಕೋಟಿ ರೂಪಾಯಿ ಹಣ ಕೊಟ್ಟಿದ್ದೆ, ಅದನ್ನ ಬಳಸಿಕೊಂಡು ಅವರು ಚುನಾವಣೆ ಗೆದ್ದಿದ್ದರು ಅಂತ ಆರೋಪಿಸಿದ್ದ. ಅದೇ ಈಗ ರೋಷನ್​ ಬೇಗ್​ಗೆ ಮುಳುವಾದಂತೆ ಕಾಣ್ತಿದೆ. ರೋಷನ್ ಬೇಗ್ ಈ ಹಿಂದೆ ಬಿಜೆಪಿ ಸೇರ್ಪಡೆಯಾಗಲು ಪ್ರಯತ್ನಿಸಿದ್ದರು. ಆದ್ರೆ ಈ ಆರೋಪಗಳಿಂದಾಗಿ ಅದು ಆಗಿರಲಿಲ್ಲ ಅಂತ ವಿಶ್ಲೇಷಿಸಲಾಗಿತ್ತು.

-masthmagaa.com

Contact Us for Advertisement

Leave a Reply