ಫ್ರಾನ್ಸ್ ಏರ್​​ಸ್ಟ್ರೈಕ್​​ನಲ್ಲಿ 50ಕ್ಕೂ ಹೆಚ್ಚು ಉಗ್ರರು ಮಟಾಷ್

masthmagaa.com:

ಮಾಲಿ:‌ ಈ ಪ್ರದೇಶದ ಮಧ್ಯ ಭಾಗದಲ್ಲಿ ಫ್ರಾನ್ಸ್​​‌ ನಡೆಸಿದ ಏರ್​​​ಸ್ಟ್ರೈಕ್​​​ನಲ್ಲಿ 50ಕ್ಕೂ ಹೆಚ್ಚು ಅಲ್​​​ ಖೈದಾ ಸಂಘಟನೆ ಜೊತೆ ಕೆಲಸ ಮಾಡ್ತಿದ್ದ ಉಗ್ರರು ಮೃತಪಟ್ಟಿದ್ದಾರೆ. ಈ ಬಗ್ಗೆ ಫ್ರಾನ್ಸ್​ ಸರ್ಕಾರವೇ ಅಧಿಕೃತ ಮಾಹಿತಿ ನೀಡಿದೆ. ಕಳೆದ ಶುಕ್ರವಾರ ಗಡಿಭಾಗದಲ್ಲಿರೊ ಬುರ್ಕಿನೊ ಫಾಸೋ ಮತ್ತು ನಿಗರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಒಂದು ವಾರದಿಂದಲೂ ಈ ಭಾಗದಲ್ಲಿ ಜಿಹಾದಿ ವಿರೋಧಿ ಅಭಿಯಾನ ನಡೆಸಲಾಗುತ್ತಿತ್ತು. ಘಟನಾ ಸ್ಥಳದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, 30ಕ್ಕೂ ಹೆಚ್ಚು ಬೈಕ್​​ಗಳನ್ನು ನಾಶ ಮಾಡಲಾಗಿದೆ ಅಂತ ಫ್ರಾನ್ಸ್​ ರಕ್ಷಣಾ ಸಚಿವೆ ಫ್ಲೋರೆನ್ಸ್ ಪಾರ್ಲಿ ಮಾಹಿತಿ ನೀಡಿದ್ದಾರೆ. ಈ ನಡುವೆ ನಾಲ್ವರು ಉಗ್ರರನ್ನು ಸೆರೆ ಹಿಡಿಯಲಾಗಿದ್ದು, ಒಂದು ಆತ್ಮಾಹುತಿ ದಾಳಿಯ ಜಾಕೆಟ್ ಕೂಡ ವಶಕ್ಕೆ ಪಡೆಯಲಾಗಿದೆ ಅಂತ ಸೇನಾ ವಕ್ತಾರ ಫ್ರೆಡರಿಕ್ ಬಾರ್ಬರಿ ಮಾಹಿತಿ  ನೀಡಿದ್ದಾರೆ.

-masthmagaa.com

Contact Us for Advertisement

Leave a Reply