masthmagaa.com:

ವಾರದ ಮೊದಲ ದಿನವೇ ಷೇರುಪೇಟೆ ದಾಖಲೆ ಬರೆದಿದೆ. ಇವತ್ತು 154 ಅಂಕ ಏರಿಕೆ ಕಂಡ ಸಂವೇದಿ ಸೂಚ್ಯಂಕ 46,253ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಷೇರುಪೇಟೆ ಇತಿಹಾಸದಲ್ಲಿ ಇದು ಸಾರ್ವಕಾಲಿಕ ದಾಖಲೆ. ನಿಫ್ಟಿ 44 ಅಂಕ ಏರಿಕೆ ಕಂಡು 13,558 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 9 ಪೈಸೆ ಗಳಿಕೆ ಕಂಡು ₹73.55 (73 ರೂಪಾಯಿ 55 ಪೈಸೆ) ಆಗಿದೆ.

ಇನ್ನು ಬಂಗಾರದ ಬೆಲೆ ಇವತ್ತು ಕಮ್ಮಿಯಾದ್ರೆ, ಬೆಳ್ಳಿ ಬೆಲೆ ಜಾಸ್ತಿಯಾಗಿದೆ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 187 ರೂಪಾಯಿ ಕಮ್ಮಿಯಾಗಿ ₹48,859 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 368 ರೂಪಾಯಿ ಜಾಸ್ತಿಯಾಗಿ ₹62,600 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರುವುದಿಲ್ಲ.

-masthmagaa.com

Contact Us for Advertisement

Leave a Reply