masthmagaa.com:

ಸೋಮವಾರ ಸಾರ್ವಕಾಲಿಕ ದಾಖಲೆ ಬರೆದಿದ್ದ ಷೇರುಪೇಟೆ ಇವತ್ತು ಅಲ್ಪ ಏರಿಕೆ ಕಂಡಿದೆ. ಮಂಗಳವಾರ 10 ಅಂಕ ಏರಿಕೆ ಕಂಡ ಸಂವೇದಿ ಸೂಚ್ಯಂಕ 46,263ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಕೂಡ 10 ಅಂಕ ಏರಿಕೆ ಕಂಡು 13,568 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 8 ಪೈಸೆ ಕುಸಿದು ಕಂಡು ₹73.63 (73 ರೂಪಾಯಿ 63 ಪೈಸೆ) ಆಗಿದೆ.

ಕಳೆದ ಕೆಲ ದಿನಗಳಿಂದ ಕಮ್ಮಿಯಾಗ್ತಾ ಹೋಗಿದ್ದ ಚಿನ್ನ-ಬೆಳ್ಳಿ ಬೆಲೆ ಇವತ್ತು ಜಾಸ್ತಿಯಾಗಿದೆ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 437 ರೂಪಾಯಿ ಜಾಸ್ತಿಯಾಗಿ ₹49,296 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 570 ರೂಪಾಯಿ ಜಾಸ್ತಿಯಾಗಿ ₹63,170 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರುವುದಿಲ್ಲ.

-masthmagaa.com

Contact Us for Advertisement

Leave a Reply