masthmagaa.com:

ಷೇರುಪೇಟೆ ಸತತ ನಾಲ್ಕನೇ ದಿನವೂ ಸಾರ್ವಕಾಲಿಕ ದಾಖಲೆ ಬರೆದಿದೆ. ಬುಧವಾರ ಸಂವೇದಿ ಸೂಚ್ಯಂಕ ಬರೋಬ್ಬರಿ 403 ಅಂಕ ಏರಿಕೆ ಕಂಡು 46,666ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಕೂಡ 115 ಅಂಕ ಏರಿಕೆ ಕಂಡು 13,683 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 5 ಪೈಸೆ ಗಳಿಕೆ ಕಂಡು ₹73.58 (73 ರೂಪಾಯಿ 58 ಪೈಸೆ) ಆಗಿದೆ.

ಚಿನ್ನ-ಬೆಳ್ಳಿ ಬೆಲೆ ಸತತ ಎರಡನೇ ದಿನ ಏರಿಕೆಯಾಗಿದೆ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 474 ರೂಪಾಯಿ ಜಾಸ್ತಿಯಾಗಿ ₹49,770 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 2,374 ರೂಪಾಯಿ ಜಾಸ್ತಿಯಾಗಿ ₹65,543 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರುವುದಿಲ್ಲ.

-masthmagaa.com

Contact Us for Advertisement

Leave a Reply