masthmagaa.com:

ಷೇರುಪೇಟೆ ಸತತ 5ನೇ ದಿನವೂ ಸಾರ್ವಕಾಲಿಕ ದಾಖಲೆ ಬರೆದಿದೆ. ಗುರುವಾರ 224 ಅಂಕ ಏರಿಕೆ ಕಂಡ ಸಂವೇದಿ ಸೂಚ್ಯಂಕ 46,890ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಕೂಡ 58 ಅಂಕ ಏರಿಕೆ ಕಂಡು 13,741 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 1 ಪೈಸೆ ಕುಸಿದು ₹73.59 (73 ರೂಪಾಯಿ 59 ಪೈಸೆ) ಆಗಿದೆ.

ಚಿನ್ನ-ಬೆಳ್ಳಿ ಬೆಲೆ ಸತತ 3ನೇ ದಿನವೂ ಏರಿಕೆ ಕಂಡಿದೆ. ಇವತ್ತು 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 237 ರೂಪಾಯಿ ಜಾಸ್ತಿಯಾಗಿ ₹50,007 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 926 ರೂಪಾಯಿ ಜಾಸ್ತಿಯಾಗಿ ₹66,469 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರುವುದಿಲ್ಲ.

-masthmagaa.com

Contact Us for Advertisement

Leave a Reply