masthmagaa.com:

ಷೇರುಪೇಟೆ ಸತತ 6ನೇ ದಿನವೂ ಸಾರ್ವಕಾಲಿಕ ದಾಖಲೆ ಬರೆದಿದೆ. ಇವತ್ತು 70 ಅಂಕ ಏರಿಕೆ ಕಂಡ ಸಂವೇದಿ ಸೂಚ್ಯಂಕ 46,961ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 20 ಅಂಕ ಏರಿಕೆ ಕಂಡು 13,761 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 3 ಪೈಸೆ ಗಳಿಕೆ ಕಂಡು ₹73.56 (73 ರೂಪಾಯಿ 56 ಪೈಸೆ) ಆಗಿದೆ.

ಚಿನ್ನ-ಬೆಳ್ಳಿ ಬೆಲೆ ಸತತ 4ನೇ ದಿನವೂ ಏರಿಕೆ ಕಂಡಿದೆ. ಇವತ್ತು 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 101 ರೂಪಾಯಿ ಜಾಸ್ತಿಯಾಗಿ ₹50,108 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 50 ರೂಪಾಯಿ ಜಾಸ್ತಿಯಾಗಿ ₹66,519 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರುವುದಿಲ್ಲ.

-masthmagaa.com

Contact Us for Advertisement

Leave a Reply