masthmagaa.com:

ಕೊರೋನಾ ವೈರಾಣುವಿನ ಹೊಸ ಪ್ರಭೇದದ ಎಫೆಕ್ಟ್​ಗೆ​ ಮುಂಬೈ ಷೇರುಪೇಟೆ ಮಕಾಡೆ ಮಲಗಿದೆ. ಇವತ್ತು ಸಂವೇದಿ ಸೂಚ್ಯಂಕ ಭಾರಿ ಕುಸಿತ ಕಂಡಿದೆ. ಬರೋಬ್ಬರಿ 1,407 ಅಂಕ ಕುಸಿದ ಸೆನ್ಸೆಕ್ಸ್​ 45,554ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಕೂಡ 432 ಅಂಕ ಕುಸಿದು 13,328 ಆಗಿದೆ. ಕೊರೋನಾ ತೊಲಗುತ್ತಿದೆ ಅನ್ನೋ ಆಶಾವಾದದೊಂದಿಗೆ ಕಳೆದ ಎರಡು ಮೂರು ವಾರ ಷೇರುಪೇಟೆಯಲ್ಲಿ ಭಾರಿ ಏರಿಕೆ ಆಗಿತ್ತು. ಆದ್ರೆ ಈಗ ವೈರಾಣುವಿನ ಹೊಸ ಅವತಾರ ಕಾಣಿಸಿಕೊಂಡಿರೋದು ಹೂಡಿಕೆದಾರರನ್ನ ಹೆದರಿಸಿದೆ. ಹೀಗಾಗಿ ಎಲ್ರೂ ದುಡ್ಡು ವಾಪಸ್ ತೆಗೀತಿದ್ದಾರೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 23 ಪೈಸೆ ಕುಸಿದು ₹73.79 (73 ರೂಪಾಯಿ 79 ಪೈಸೆ) ಆಗಿದೆ.

ಚಿನ್ನ-ಬೆಳ್ಳಿ ಬೆಲೆಯಲ್ಲಿ ಸತತ 5ನೇ ದಿನ ಏರಿಕೆ ಕಂಡಿದೆ. ಇವತ್ತು 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 200 ರೂಪಾಯಿ ಜಾಸ್ತಿಯಾಗಿ ₹50,308 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 673 ರೂಪಾಯಿ ಜಾಸ್ತಿಯಾಗಿ ₹67,192 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರೋದಿಲ್ಲ.

-masthmagaa.com

Contact Us for Advertisement

Leave a Reply