masthmagaa.com:

ಷೇರುಪೇಟೆ ನಿರಂತರ 5ನೇ ದಿನವೂ (ಬ್ಯುಸಿನೆಸ್​ ಡೇ) ಕುಸಿತ ಕಂಡಿದೆ. ಅದ್ರಲ್ಲೂ ಇವತ್ತು ಸಂವೇದಿ ಸೂಚ್ಯಂಕ ಬರೋಬ್ಬರಿ 1,145 ಅಂಕಗಳ ಭಾರಿ ಕುಸಿತ ಕಂಡು 49,744ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಕೂಡ 306 ಅಂಕ ಇಳಿಕೆ ಕಂಡು 14,676 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 16 ಪೈಸೆ ಗಳಿಕೆ ಕಂಡು ₹72.49 (72 ರೂಪಾಯಿ 49 ಪೈಸೆ) ಆಗಿದೆ.

ಇನ್ನು ಚಿನ್ನ-ಬೆಳ್ಳಿ ಬೆಲೆ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 548 ರೂಪಾಯಿ ಜಾಸ್ತಿಯಾಗಿ ₹46,649 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 956 ರೂಪಾಯಿ ಜಾಸ್ತಿಯಾಗಿ ₹69,370 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರೋದಿಲ್ಲ.

-masthmagaa.com

Contact Us for Advertisement

Leave a Reply