masthmagaa.com:

ಶುಕ್ರವಾರ ಷೇರುಪೇಟೆ ಭಾರಿ ಕುಸಿತ ಕಂಡಿದೆ. ಸಂವೇದಿ ಸೂಚ್ಯಂಕ ಬರೋಬ್ಬರಿ 1,939 ಅಂಕ ಕುಸಿದು 49,100ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 568 ಅಂಕ ಇಳಿಕೆ ಕಂಡು 14,529 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 1 ರೂಪಾಯಿ 4 ಪೈಸೆ ಕುಸಿದು ₹73.47 (73 ರೂಪಾಯಿ 47 ಪೈಸೆ) ಆಗಿದೆ.

ಇನ್ನು ಚಿನ್ನ-ಬೆಳ್ಳಿ ವಿಚಾರಕ್ಕೆ ಬಂದ್ರೆ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 124 ರೂಪಾಯಿ ಜಾಸ್ತಿಯಾಗಿ ₹46,570 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 1,604 ರೂಪಾಯಿ ಕಮ್ಮಿಯಾಗಿ ₹68,621 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರೋದಿಲ್ಲ.

-masthmagaa.com

Contact Us for Advertisement

Leave a Reply