masthmagaa.com:

ಸತತ ಎರಡು ದಿನಗಳಿಂದ ಭಾರಿ ಕುಸಿತ ಕಂಡಿದ್ದ ಷೇರುಪೇಟೆ ಇವತ್ತು ಚೇತರಿಕೆ ಕಂಡಿದೆ. ಸಂವೇದಿ ಸೂಚ್ಯಂಕ ಇವತ್ತು 568 ಅಂಕಗಳ ಏರಿಕೆ ಕಂಡು 49,009ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 182 ಅಂಕ ಏರಿಕೆ ಕಂಡು 14,507 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 11 ಪೈಸೆ ಗಳಿಕೆ ಕಂಡು ₹72.51 ಆಗಿದೆ.

ಇನ್ನು ಚಿನ್ನ-ಬೆಳ್ಳಿ ವಿಚಾರಕ್ಕೆ ಬಂದ್ರೆ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 225 ರೂಪಾಯಿ ಕಮ್ಮಿಯಾಗಿ ₹44,655 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 377 ರೂಪಾಯಿ ಜಾಸ್ತಿಯಾಗಿ ₹64,658 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರೋದಿಲ್ಲ.

-masthmagaa.com

Contact Us for Advertisement

Leave a Reply