masthmagaa.com:

ದೇಶದ ಮೊದಲ ಕೊರೋನಾ ಲಸಿಕೆ ಕೋವಾಕ್ಸಿನ್‌ನ ಮೂರನೇ ಹಂತದ ಪ್ರಯೋಗ ಮುಂದಿನ ಒಂದು ಅಥವಾ ಎರಡು ತಿಂಗಳೊಳಗೆ ಮುಗಿಯಬಹುದು ಅಂತ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ತಿಳಿಸಿದ್ದಾರೆ.

ಭಾರತ್‌ ಬಯೋಟೆಕ್‌ ಕಂಪನಿ ಐಸಿಎಂಆರ್‌ ಸಹಯೋಗದೊಂದಿಗೆ  ಕೋವಾಕ್ಸಿನ್‌ ಅನ್ನೋ ಲಸಿಕೆಯ ತಯಾರಿಸುತ್ತಿರುವುದು ಎಲ್ರಿಗೂ ಗೊತ್ತು. ಈ ಸ್ಥಳೀಯ ಲಸಿಕೆಯನ್ನ ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ನಾವಿದ್ದೇವೆ. ಲಸಿಕೆಯ ಮೂರನೇ ಹಂತದ ಪ್ರಯೋಗವು ಈಗಾಗಲೇ ಆರಂಭವಾಗಿದ್ದು, 25,000 ಸ್ವಯಂಸೇವಕರು ಪ್ರಯೋಗದಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ಒಂದೆರಡು ತಿಂಗಳೊಳಗೆ ಈ ಮೂರನೇ ಹಂತದ ಪ್ರಯೋಗ ಮುಗಿಯಬಹುದು.‌ 2021ರ ಏಪ್ರಿಲ್-‌ ಮೇ ವೇಳೆಗೆ ಕೋವಾಕ್ಸಿನ್‌ ಲಸಿಕೆ ಬಿಡುಗಡೆ ಮಾಡುವ ಗುರಿ ಹೊಂದಿದ್ದು, ಜುಲೈ ವೇಳೆಗೆ 20-25 ಕೋಟಿ ಭಾರತೀಯರಿಗೆ ಲಸಿಕೆ ನೀಡುವ ಪ್ಲಾನ್‌ ಹೊಂದಿದ್ದೇವೆ ಅಂತ ಹೇಳಿದ್ದಾರೆ.

ಇನ್ನು ಆಸ್ಟ್ರಾಝೆನೆಕಾ ಕಂಪನಿ  ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಜೊತೆ ಸೇರಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು  ಮುಂದಿನ ಫೆಬ್ರವರಿ ವೇಳೆಗೆ  ಆರೋಗ್ಯ ಕಾರ್ಯಕರ್ತರು ಹಾಗೂ ಹಿರಿಯರಿಗೆ ಲಭ್ಯವಾಗಲಿದೆ ಸೀರಂ ಕಂಪನಿ  ಅಂತ ಹೇಳಿತ್ತು. ಇದೀಗ ದೇಶೀಯ ಲಸಿಕೆ ಕೋವಾಕ್ಸಿನ್ ಈ ರೀತಿ ಹೇಳಿದ್ದು, ಯಾವ ಲಸಿಕೆ ಮೊದಲು ಜನರ ಕೈ ಸೇರಲಿದೆ ಅಂತ ಕಾದು ನೋಡಬೇಕಾಗಿದೆ.

-masthmagaa.com

Contact Us for Advertisement

Leave a Reply