ಪ್ರಪಂಚದಲ್ಲಿ ಧರ್ಮಗಳು ಹರಡಿದ್ದು ಹೇಗೆ..? ಕಂಪ್ಲೀಟ್ ಡೀಟೈಲ್ಸ್​​ ಇಲ್ಲಿದೆ

masthmagaa.com:

ಹಾಯ್ ಫ್ರೆಂಡ್ಸ್, ಸಿಂಧೂ ಬಯಲಿನ ನಾಗರಿಕತೆ ಮೂಲಕ ಹಿಂದೂ ಸಂಸ್ಕೃತಿಯ ಉಗಮವಾಯ್ತು.. ಕ್ರಿಸ್ತಪೂರ್ವ 3,300ರಿಂದ 1,300ರವರೆಗೆ ಹಿಂದೂ ಧರ್ಮ ಭಾರತದಾದ್ಯಂತ ಹರಡಿಕೊಂಡಿತು.. ನಂತರದಲ್ಲಿ ಬರ್ಮಾ, ಥೈಲ್ಯಾಂಡ್, ಕಾಂಬೋಡಿಯಾದಲ್ಲೂ ಹಿಂದೂ ಧರ್ಮ ವ್ಯಾಪಿಸಿಕೊಳ್ತು. ಆದ್ರೆ ಹಿಂದೂ ಧರ್ಮ ಕಾಲ ಕಳೆದಂತೆ ಭಾರತ ಬಿಟ್ಟು ಹೊರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಹರಡಲು ಸಾಧ್ಯವಾಗಲಿಲ್ಲ. ಯಾಕಂದ್ರೆ ಹಿಂದೂಧರ್ಮ ಬೇರೆ ಧರ್ಮಗಳಂತೆ ಪ್ರಚಾರಕರನ್ನು ಹೊಂದಿರಲಿಲ್ಲ. ಜೊತೆಗೆ ಹಿಂದೂಗಳ ವೇದೋಪನಿಷತ್ತುಗಳು, ಪುರಾಣಗಳೆಲ್ಲವೂ ಸಂಸ್ಕೃತದಲ್ಲೇ ಇದ್ದಿದ್ದರಿಂದ ಇದು ಬೇರೆ ದೇಶಗಳಲ್ಲಿ ಹರಡುವಲ್ಲಿ ಯಶಸ್ವಿಯಾಗಲಿಲ್ಲ. ಜೊತೆಗೆ ಹಿಂದೂ ಧರ್ಮದಲ್ಲಿರೋ ಜಾತಿ ಪದ್ದತಿ ಇದರ ಹರಡುವಿಕೆಗೆ ದೊಡ್ಡ ಅಡಚಣೆಯಾಯ್ತು. ಬೇರೆ ಧರ್ಮದ ಒಬ್ಬವ್ಯಕ್ತಿ ಹಿಂದೂ ಧರ್ಮ ಇಷ್ಟಪಟ್ಟು ಮತಾಂತರಕ್ಕೆ ಮುಂದಾದರೂ, ಇಲ್ಲಿರುವ ಲೆಕ್ಕವಿಲ್ಲದಷ್ಟು ಜಾತಿಗಳಲ್ಲಿ ಆತ ಯಾವ ಜಾತಿಗೆ ಸೇರಬೇಕು? ಹೇಗೆ ಸೇರಬೇಕು ಅನ್ನೋ ಸವಾಲು ಎದುರಾಯ್ತು. ಹೀಗಾಗಿ ಹಿಂದೂಧರ್ಮ ಭಾರತ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾತ್ರ ಉಳಿದುಕೊಳ್ಳುವಂತಾಯ್ತು.

ಕ್ರಿಸ್ತಪೂರ್ವ 623ರಲ್ಲಿ ನೇಪಾಳದ ಲುಂಬಿಣಿಯಲ್ಲಿ ಹಿಂದೂ ಧರ್ಮದಲ್ಲಿ ಹುಟ್ಟಿದ ಗೌತಮ ಬುದ್ಧ ಬೌದ್ಧ ಅವರು ಧರ್ಮಕ್ಕೆ ನಾಂದಿ ಹಾಡಿದ್ರು.. ಈ ಮೂಲಕ ಆರಂಭದಲ್ಲಿ ಮಧ್ಯ ಭಾರತದ ಬಹುದೊಡ್ಡ ಭಾಗದಲ್ಲಿ ಬೌದ್ಧ ಧರ್ಮ ಆವರಿಸಿತು. ಆದ್ರೆ ಕಾಲ ಕಳೆದಂತೆ ಬೌದ್ಧ ಧರ್ಮ ಭಾರತದಲ್ಲಿ ಅತ್ಯಂತ ಪ್ರಬಲವಾಗಿದ್ದ ಹಿಂದೂ ಧರ್ಮದ ಒಳಗೆ ಮರ್ಜ್ ಆಯ್ತು. ಸೇಮ್ ಟೈಮ್ ಭಾರತದ ಹೊರಗೆ ಹರಡಲು ಶುರುವಾಯ್ತು. ಅಂದ್ರೆ ಚೀನಾ ಕಡೆ ಸಾಗಿದ ಈ ಬೌದ್ಧ ಧರ್ಮ, ಕೊರಿಯಾ, ಜಪಾನ್, ತೈವಾನ್, ಟಿಬೆಟ್‍ಗಳಲ್ಲಿ ನೆಲೆಯೂರಿತು. ಬರೀ ನೆಲೆ ಅಲ್ಲ.. ಫುಲ್ ಆವರಿಸಿಕೊಂಡು ಬಿಡ್ತು..

ಕ್ರಿಸ್ತಶಕ 2ನೇ ಶತಮಾನದಲ್ಲಿ ಜೆರುಸೆಲೆಂನಲ್ಲಿ ಯೇಸುಕ್ತಿಸ್ತರನ್ನ ಶಿಲುಬೆಗೇರಿಸಲಾಯ್ತು. ನಂತರ ಕ್ರೈಸ್ತ ಧರ್ಮ ಯೂರೋಪಿನ ಬಹುತೇಕ ಭಾಗಗಳನ್ನು ಆವರಿಸಿಕೊಂಡಿತು.

ಈ ನಡುವೆ ಕ್ರಿಸ್ತಶಕ 571ರಲ್ಲಿ ಮೆಕ್ಕಾದಲ್ಲಿ ಮೊಹಮ್ಮದ್​​​ರ ಜನನವಾಯ್ತು. ಸೌದಿ ಅರೇಬಿಯಾದಿಂದ ಹರಡಲು ಶುರುವಾದ ಇಸ್ಲಾಂ, ಭಾರತ, ಆಫ್ರಿಕಾ, ಯೂರೋಪ್ ಸೇರಿದಂತೆ ಹಲವೆಡೆ ವೇಗವಾಗಿ ಹಬ್ಬಲು ಶುರುವಾಯ್ತು.

ಈ ನಡುವೆ ಜುದಾಯಿಸಮ್ ಅಂದ್ರೆ ಯಹೂದಿ ಧರ್ಮ ಕೂಡ ಯೂರೋಪಿನ ಸಣ್ಣ ಭಾಗದಲ್ಲಿ ಹರಡಿಕೊಂಡಿತ್ತು. ಆದ್ರೆ ಸಂವಹನ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಾ ಹೋದಂತೆ ಧರ್ಮಗಳ ಹರಡುವಿಕೆ ವೇಗ ಜಾಸ್ತಿಯಾಯ್ತು. ಯುರೋಪಿಯನ್ನರು ಪ್ರಪಂಚದ ಮೂಲೆ ಮೂಲೆಗೂ ಜಲಮಾರ್ಗ ಕಂಡುಹಿಡಿದರು. ಅದರಲ್ಲೂ ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಹೆಸರು ಮಾಡಿದ್ದ ಇಂಗ್ಲೆಂಡ್ ಕ್ರೈಸ್ತ ಧರ್ಮ ಹರುಡವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ನಾಗರಿಕತೆಯೇ ಇಲ್ಲದ ಸ್ಥಳಗಳಿಗೂ ಹೋಗಿ ಹೊಸದಾಗಿ ಧರ್ಮವನ್ನು ಹರಡಿದ್ರು. ಆದ್ರೆ ಭಾರತದಲ್ಲಿ ಹಿಂದೂ ಧರ್ಮ, ಚೀನಾದಲ್ಲಿ ಬೌದ್ಧ ಧರ್ಮ ಈಗಾಗಲೇ ಗಟ್ಟಿಯಾಗಿ ನೆಲೆಯೂರಿದ್ದರಿಂದ ಅದನ್ನು ದೊಡ್ಡ ಪ್ರಮಾಣದಲ್ಲಿ ಬದಲಿಸಲು ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂಗೆ ಸಾಧ್ಯವಾಗಲಿಲ್ಲ. ಆದ್ರೆ ಎಲ್ಲೆಲ್ಲಿ ಗಟ್ಟಿಯಾದ ಪುರಾತನ ಧರ್ಮಗಳು ಇರಲಿಲ್ಲವೋ, ಅಲ್ಲೆಲ್ಲಾ ವೇಗವಾಗಿ ಹರಡಿದ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿ, ಸಂಖ್ಯೆಯಲ್ಲಿ ಹಿಂದೂ ಧರ್ಮವನ್ನೂ ಮೀರಿಸಿ ಬೆಳೆದವು.

ಅಮೆರಿಕ, ದಕ್ಷಿಣ ಅಮೆರಿಕ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಆಫ್ರಿಕಾದ ಅರ್ಧಭಾಗದಲ್ಲಿ ಕ್ರೈಸ್ತ ಧರ್ಮ ದೃಢವಾಗಿ ನೆಲೆಯೂರಿತು. ಅದೇ ರೀತಿ ಇಸ್ಲಾಂ ಧರ್ಮ ಏಷ್ಯಾದ ಒಂದಷ್ಟು ದೇಶ ಮತ್ತು ಆಫ್ರಿಕಾದ ಉತ್ತರ ಭಾಗದಲ್ಲಿ ನೆಲೆಯೂರಿತು.. ಆದ್ರೆ ಹಿಂದೂ ಧರ್ಮ ಏಷ್ಯಾ ಅದ್ರಲ್ಲೂ ಭಾರತ ಬಿಟ್ರೆ ಉಳಿದಂತೆ ಬೇರೆ ಕಡೆ ಅಷ್ಟೊಂದು ಪ್ರಭಾವಶಾಲಿಯಾಗಿ ನೆಲೆಯೂರಲು ನಾವು ಆಗಲೇ ಹೇಳಿದ ಕಾರಣಗಳಿಂದ ಸಾಧ್ಯವಾಗಲೇ ಇಲ್ಲ.. ಆದ್ರೆ ದಕ್ಷಿಣ ಅಮೆರಿಕ ಖಂಡದ ಸಣ್ಣ ಸಣ್ಣ ರಾಷ್ಟ್ರಗಳಾದ ಗಯಾನ ಮತ್ತು ಸುರಿನಾಮ್ ಕ್ರಿಶ್ಚಿಯನ್ ರಾಷ್ಟ್ರಗಳಾಗಿದ್ರು ಕೂಡ ಇಲ್ಲಿ ಹಿಂದೂಗಳ ಸಂಖ್ಯೆ ಜಾಸ್ತಿಯಿದ್ದು, ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ… ಇವರೆಲ್ಲಾ ಶತಮಾನಗಳ ಹಿಂದೆ ಭಾರತದಿಂದ ವಲಸೆ ಹೋದ ಕಾರ್ಮಿಕರು ಮತ್ತವರ ಮುಂದುವರಿದ ವಂಶಸ್ಥರು. ಇವರಲ್ಲಿ ಅರ್ಧಕ್ಕರ್ಧ ಕ್ರಿಶ್ಚಿಯಾನಿಟಿಗೆ ಕನ್ವರ್ಟ್ ಆಗಿದ್ದಾರೆ. ಹಿಂದೂ ಮೂಲದ ಕ್ರಿಶ್ಚಿಯನ್ನರಾಗಿದಾರೆ. ಆದ್ರೂ ಈಗಲೂ ದೊಡ್ಡ ಸಂಖ್ಯೆಯ ಜನ ತಮ್ಮ ಪೂರ್ವಜರ ಹಿಂದೂ ಧರ್ಮವನ್ನ ಅನುಸರಿಸಿಕೊಂಡು ಹೋಗುತ್ತಿದ್ದಾರೆ.

2010ರ ಅಂಕಿ ಅಂಶದ ಪ್ರಕಾರ ಪ್ರಪಂಚದಲ್ಲಿರೋ ಧರ್ಮಗಳ ಲೆಕ್ಕಾಚಾರ..!
ಕ್ರಿಶ್ಚಿಯಾನಿಟಿ – 31.5%
ಇಸ್ಲಾಮ್ – 23.2%
ಹಿಂದೂಯಿಸಂ – 15%
ಬುದ್ಧಿಸಂ – 7.1%
ಜಾನಪದ ಧರ್ಮಗಳು – 5.9%
ಇತರ ಸಣ್ಣ ಧರ್ಮಗಳು – 1%
ನಾಸ್ತಿಕರು – 16.3%

2050ರ ವೇಳೆಗೆ ಎಷ್ಟು ಹೆಚ್ಚಳ..?
(SOURCE: PEW RESEARCH CENTER)
ಬುದ್ಧಿಸಂ -0.3%
ಇತರೆ ಧರ್ಮಗಳು 6%
ನಾಸ್ತಿಕರು – 6%
ಜಾನಪದ ಧರ್ಮಗಳು – 11%
ಜುದಾಯಿಸಂ – 16%
ಹಿಂದೂಸಯಿಸಂ – 34%
ಕ್ರಿಶ್ಚಿಯಾನಿಟಿ – 35%
ಇಸ್ಲಾಂ – 73%

ಫ್ರೆಂಡ್ಸ್, ಇದು ಜಗತ್ತಿನಲ್ಲಿ ವಿವಿಧ ಧರ್ಮಗಳು ಹರಡಿದ್ದು ಹೇಗೆ? ಸದ್ಯದ ಸ್ಥಿತಿಗತಿ ಏನು? ಮುಂದಿನ ಸಾಧ್ಯತೆಗಳೇನು ಅನ್ನೋದನ್ನ ತಿಳಿಸಿಕೊಡುವ ಪ್ರಯತ್ನ.

-masthmagaa.com

Contact Us for Advertisement

Leave a Reply