ಪೆನ್ಸಿಲ್ವೇನೀಯಾ ಫಲಿತಾಂಶ ಪ್ರಶ್ನಿಸಿದ್ದ ಟ್ರಂಪ್ ಅರ್ಜಿ ವಜಾ

masthmagaa.com:

ಪೆನ್ಸಿಲ್ವೇನಿಯಾದ  ಫಲಿತಾಂಶವನ್ನ ಪ್ರಶ್ನಿಸಿ ಡೊನಾಲ್ಡ್‌ ಟ್ರಂಪ್‌ ಪರ ಅವರ ತಂಡ ಸಲ್ಲಿಸಿದ್ದ ಅರ್ಜಿಯನ್ನ ಅಲ್ಲಿನ ಫೆಡರಲ್‌ ಮೇಲ್ಮನವಿ ನ್ಯಾಯಾಲಯ ವಜಾಗೊಳಿಸಿದೆ. ಈ ಮೂಲಕ ಟ್ರಂಪ್‌  ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಮುಖಭಂಗ ಅನುಭವಿಸುವಂತಾಗಿದೆ.

ಅರ್ಜಿ ವಿಚಾರಣೆ ನಡೆಸಿದ ಯುಎಸ್ ಸರ್ಕ್ಯೂಟ್ ಕೋರ್ಟ್ ಆಫ್ ಅಪೀಲ್ಸ್‌ನ ತ್ರಿಸದಸ್ಯ ಪೀಠವು ʻಅಧ್ಯಕ್ಷರನ್ನ ಆಯ್ಕೆ ಮಾಡಬೇಕಾಗಿರುವುದು ಮತದಾರರೇ ಹೊರತು, ವಕೀಲರಲ್ಲ. ಅನ್ಯಾಯ ಆಗಿರುವ ಕುರಿತು ಆರೋಪ ಮಾಡುವುದೇನೋ ಸರಿ, ಆದ್ರೆ ಚುನಾವಣೆಯನ್ನೇ ಅನ್ಯಾಯ ಅಂತ ಹೇಳುವುದು ಸರಿಯಲ್ಲ. ಇಂತಹ ಆರೋಪಗಳಿಗೆ ಸೂಕ್ತ ಪುರಾವೆಗಳು ಅಗತ್ಯವಾಗಿ ಬೇಕಾಗಿರುತ್ತೆ. ಅಂತಹ ಸಾಕ್ಷಿಗಳು ಯಾವುದೂ ನಮ್ಮ ಮುಂದಿಲ್ಲʼ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply