ತೆರಿಗೆ ವಂಚನೆ ಕೇಸ್​​… ರಾಬರ್ಟ್​ ವಾದ್ರಾ ಹೇಳಿಕೆ ದಾಖಲಿಸಿದ ಐಟಿ ಇಲಾಖೆ..!

masthmagaa.com:

ದೆಹಲಿ: ತೆರಿಗೆ ವಂಚನೆ ಪ್ರಕರಣ ಸಂಬಂಧ ಉದ್ಯಮಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್​ ವಾದ್ರಾ ಅವರ ಹೇಳಿಕೆಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲಿಸಿದ್ಧಾರೆ. ಇಂಗ್ಲೆಂಡ್​​​ನಲ್ಲಿ ರಾಬರ್ಟ್​ ವಾದ್ರಾ ಶಸ್ತ್ರಾಸ್ತ್ರ ಡೀಲರ್ ಸಂಜಯ್ ಭಂಡಾರಿಯವರ ಮೂಲಕ ಒಂದು ಆಸ್ತಿಯನ್ನು ಖರೀದಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. 2009ರಲ್ಲಿ ನಡೆದ ಪೆಟ್ರೋಲಿಯಂ ಡೀಲ್​​​​​​​​ನ ಕಿಕ್​​ಬ್ಯಾಕ್​​ ರೂಪದಲ್ಲಿ ವಾದ್ರಾ ಆ ಆಸ್ತಿಯನ್ನು ಪಡೆದಿದ್ದಾರೆ ಅನ್ನೋ ಆರೋಪವಿದೆ. ಇದ್ರ ಜೊತೆಗೆ 2018ರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಗಾಗಲೇ  ಜಾರಿ ನಿರ್ದೇಶನಾಲಯ ಕೂಡ ರಾಬರ್ಟ್​​ ವಾದ್ರಾ ಅವರನ್ನು ತನಿಖೆಗೆ ಒಳಪಡಿಸಿದೆ.

ಐಟಿ ಅಧಿಕಾರಿಗಳು ವಿಚಾರಣೆಗೆ ಬರುವಂತೆ ರಾಬರ್ಟ್​ ವಾದ್ರಾ ಅವರಿಗೆ ನೋಟಿಸ್ ನೀಡಿತ್ತು. ಆದ್ರೆ ಕೊರೋನಾ ನೆಪ ನೀಡಿದ್ದ ರಾಬರ್ಟ್​ ವಾದ್ರಾ ಸಮಯಾವಕಾಶ ಕೇಳಿದ್ರು. ಹೀಗಾಗಿ ಇಂದು ಅಧಿಕಾರಿಗಳೇ ರಾಬರ್ಟ್​ ವಾದ್ರಾ ಅವರ ಕಚೇರಿಗೆ ಬಂದಿದ್ದಾರೆ. ಹೇಳಿಕೆ ದಾಖಲಿಸಿಕೊಂಡಿದ್ದಾರೆ ಅಂತ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply