masthmagaa.com:

ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಮತ್ತು ದೇಶದ ಭದ್ರತೆಯನ್ನು ಬಲಪಡಿಸಲು ಬದ್ಧ ಅಂತ ಪುನರುಚ್ಚರಿಸಿರುವ ಭಾರತ ಮತ್ತೆ 18 ಜನರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ. ಈ 18 ಉಗ್ರರಲ್ಲಿ ಎಲ್​ಇಟಿ ಮುಖ್ಯಸ್ಥ ಹಫೀಜ್ ಸಯೀದ್​ನ ಸೋದರ ಸಂಬಂಧಿ ಅಬ್ದುರ್ ರೆಹಮಾನ್​ ಮಕ್ಕಿ, 1999ರ ಕಾಂದಾಹಾರ್​ ವಿಮಾನ ಹೈಜಾಕ್​ನಲ್ಲಿ ಭಾಗಿಯಾದ ಯುಸುಫ್ ಅಝರ್, 26/11 ಮುಂಬೈ ದಾಳಿಯ ಆರೋಪಿ ಎಲ್​ಇಟಿ ಸಂಘಟನೆಯ ಯುಸುಫ್ ಮುಝಾಮಿಲ್, ಮುಂಬೈ ಬ್ಲಾಸ್ಟ್​ನ ಮಾಸ್ಟರ್ ಮೈಂಡ್ ಟೈಗರ್ ಮೆಮೊನ್ ಮತ್ತು ಛೋಟ ಶಕೀಲ್ ಸೇರಿದ್ದಾರೆ. ಇವರೆಲ್ಲರನ್ನೂ Unlawful Activities Prevention Act-1967 (UAPA) ಕಾಯ್ದೆಗೆ 2019ರಲ್ಲಿ ಮಾಡಿದ ತಿದ್ದುಪಡಿ ಅಡಿಯಲ್ಲಿ ಘೋಷಿತ ಉಗ್ರರ ಪಟ್ಟಿಗೆ ಸೇರಿಸಲಾಗಿದೆ ಅಂತ ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಬಹುತೇಕ ಎಲ್ಲರೂ ಪಾಕ್ ಮೂಲದ ಉಗ್ರರಾಗಿದ್ದಾರೆ.

-masthmagaa.com

Contact Us for Advertisement

Leave a Reply