ಆ ಫೋನ್​​ಗಳಿಗೆ ಕರೆ ಬಂದ್ರೆ ಅದು ಚೀನಾದಿಂದಲೇ ಬಂದಿದೆ ಅಂತ ಅರ್ಥ..!

masthmagaa.com:

ದೆಹಲಿ: ಭಾರತ-ಚೀನಾ ನಡುವೆ ಗಡಿ ಸಂಘರ್ಷ ಮುಂದುವರಿದಿದ್ದು, ಮಾತುಕತೆ ಮೂಲಕ ಪರಿಸ್ಥಿತಿ ಸುಧಾರಿಸಲು ಸರ್ಕಸ್ ಮಾಡಲಾಗ್ತಿದೆ. ದೊಡ್ಡ ದೊಡ್ಡ ಮಟ್ಟದ್ದೆಲ್ಲಾ ಸಂಘರ್ಷ ಆದಾಗ ಮಾತ್ರ ನಡೆಯುತ್ತೆ.. ಆದ್ರೆ ಗಡಿಯಲ್ಲಿ ಯಾವಾಗಲೂ ಒಂದು ರೀತಿಯ ಮಾತುಕತೆ ನಡೆಯುತ್ತಲೇ ಇರುತ್ತೆ. ಅದೇ ಹಾಟ್‍ಲೈನ್ ಮೂಲಕ..

ಹಾಟ್‍ಲೈನ್ ಅನ್ನೋದು ಎರಡೂ ದೇಶದ ಯೋಧರ ನಡುವೆ ಮಾತುಕತೆಗಾಗಿ ಇರುವ ಒಂದು ವ್ಯವಸ್ಥೆ. ಭಾರತದಲ್ಲಿ ಈ ರೀತಿಯ ಹಾಟ್‍ಲೈನ್ ವ್ಯವಸ್ಥೆ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್ ನೋಡಿಕೊಳ್ಳುತ್ತೆ. ಭಾರತ-ಚೀನಾ ಗಡಿಯಲ್ಲಿ ಒಟ್ಟು 5 ಕಡೆ ಈ ಹಾಟ್‍ಲೈನ್ ವ್ಯವಸ್ಥೆ ಇದೆ. ಇಲ್ಲಿ ಫೋನ್ ರಿಂಗ್ ಆಯ್ತು ಅಂದ್ರೆ ಅದು ಗಡಿಯಾಚೆಯ ದೇಶದಿಂದಲೇ ಬಂದಿದೆ ಅಂತ ಯೋಧರಿಗೆ ಗೊತ್ತಾಗುತ್ತೆ. ಹೀಗೆ ಸಂದೇಶ ಸ್ವೀಕರಿಸಿದ ಯೋಧರು ಅದನ್ನು ಎಲ್ಲಿಗೆ ತಲುಪಿಸಬೇಕೋ ತಲುಪಿಸ್ತಾರೆ.. ನಂತರ ಏನಾದ್ರು ರಿಯಾಕ್ಷನ್ ಕೊಡಬೇಕಾದ್ರೆ ಅದೇ ಹಾಟ್‍ಲೈನ್ ಮೂಲಕ ಕೊಡ್ತಾರೆ. ಎಲ್‍ಎಸಿಯಲ್ಲಿ ನಿಯೋಜಿಸಲ್ಪಟ್ಟಿರುವ ತುಕುಡಿಯ ಕಮಾಂಡರ್ ಸಂದೇಶ ಸ್ವೀಕರಿಸುವ ಮತ್ತು ಕಳುಹಿಸುವ ಕೆಲಸ ಮಾಡ್ತಾರೆ. ಭಾರತ-ಚೀನಾ ಗಡಿಯ ಕೆಲ ಭಾಗ ದೊಡ್ಡ ದೊಡ್ಡ ಗೋಡೆಗಳ ಮೂಲಕ ಗಡಿ ವಿಭಜಿಸಿಲ್ಲ. ಕೆಲವೊಂದು ಪ್ರದೇಶಗಳಲ್ಲಿ ಸಾಕು ಪ್ರಾಣಿಗಳು ಮತ್ತು ಮನುಷ್ಯರು ಮಿಸ್ ಆಗಿ ಗಡಿ ದಾಟಿಬಿಡ್ತಾರೆ.. ಇಂಥಾ ಸಮಯದಲ್ಲಿ ಯೋಧರು ಹಾಟ್‍ಲೈನ್‍ಗಳ ಮೂಲಕ ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ತಾರೆ. ಶಾಂತಿಯ ಸಮಯದಲ್ಲಿ ಈ ಹಾಟ್‍ಲೈನ್‍ಗಳು ವರ್ಕ್‍ಔಟ್ ಆಗುತ್ತವೆ. ಆದ್ರೆ ಸಂಘರ್ಷದ ಸಮಯದಲ್ಲಿ ಈ ಹಾಟ್‍ಲೈನ್‍ಗಳ ಮೂಲಕ ಸಮಸ್ಯೆ ಪರಿಹರಿಸೋದು ಅಸಾಧ್ಯವೇ ಸರಿ..

-masthmagaa.com

Contact Us for Advertisement

Leave a Reply