ಸಕ್ರಿಯ ಪ್ರಕರಣಗಳಲ್ಲಿ 2ನೇ ಸ್ಥಾನಕ್ಕೆ ಭಾರತ.. ಅಮೆರಿಕದಲ್ಲಿ ನಮಗಿಂತ 5 ಪಟ್ಟು ಹೆಚ್ಚು..!

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 64,553 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು 1,007 ಸೋಂಕಿತರು ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 24.61 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 48,040 ಆಗಿದೆ. 

ಕಳೆದ 24 ಗಂಟೆಗಳಲ್ಲಿ 55,000+ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 17.51 ಲಕ್ಷ ದಾಟಿದ್ದು, 6.61 ಲಕ್ಷ ಸೋಂಕಿತರು ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕ್ರಿಯ ಪ್ರಕರಣಗಳಲ್ಲಿ ಬ್ರೆಜಿಲ್ ಅನ್ನು ಮೀರಿಸಿರುವ ಭಾರತ 2ನೇ ಸ್ಥಾನಕ್ಕೆ ಬಂದಿದೆ. ಅಮೆರಿಕದಲ್ಲಿ ಭಾರತಕ್ಕಿಂತ 5 ಪಟ್ಟು ಹೆಚ್ಚು ಸಕ್ರಿಯ ಪ್ರಕರಣಗಳಿವೆ.

ದೇಶವಾರು ಸಕ್ರಿಯ ಪ್ರಕರಣ (ಟಾಪ್-4):

1. ಅಮೆರಿಕ: 32 ಲಕ್ಷ+ ಪ್ರಕರಣ (63%)

2. ಭಾರತ: 6.61 ಲಕ್ಷ+ ಪ್ರಕರಣ (27%)

3. ಬ್ರೆಜಿಲ್: 6.08 ಲಕ್ಷ+ ಪ್ರಕರಣ (18%)

4. ರಷ್ಯಾ: 1.80 ಲಕ್ಷ+ ಪ್ರಕರಣ (19%)

ಭಾರತದಲ್ಲಿ ಗುಣಮುಖ ಪ್ರಮಾಣ 71.17% ಇದ್ದು, ಸಾವಿನ ಪ್ರಮಾಣ 1.95% ಇದೆ. ಆಗಸ್ಟ್​ 13ರಂದು ದೇಶದಲ್ಲಿ 8.48 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 2.76 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ತಿಳಿಸಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 1.50 ಲಕ್ಷ ಪ್ರಕರಣ (19,000+ ಸಾವು)

2. ಆಂಧ್ರಪ್ರದೇಶ: 90,000+ ಪ್ರಕರಣ (2,300+ ಸಾವು)

3. ಕರ್ನಾಟಕ: 78,000+ ಪ್ರಕರಣ (3,600+ ಸಾವು)

4. ತಮಿಳುನಾಡು: 53,000+ ಪ್ರಕರಣ (5,300+ ಸಾವು)

5. ಉತ್ತರಪ್ರದೇಶ: 49,000+ ಪ್ರಕರಣ (2,200+ ಸಾವು)

6. ಬಿಹಾರ: 31,000+ ಪ್ರಕರಣ (426 ಸಾವು)

7. ಪಶ್ಚಿಮ ಬಂಗಾಳ: 26,000+ ಪ್ರಕರಣ (2,200+ ಸಾವು)

8. ತೆಲಂಗಾಣ: 23,000+ ಪ್ರಕರಣ (674 ಸಾವು)

9. ಅಸ್ಸಾಂ: 22,000+ ಪ್ರಕರಣ (169 ಸಾವು)

10. ರಾಜಸ್ಥಾನ: 14,000+ ಪ್ರಕರಣ (833 ಸಾವು)

-masthmagaa.com

Contact Us for Advertisement

Leave a Reply