masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 53,601 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು 871 ಸೋಂಕಿತರು ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 22.68 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 45,257 ಆಗಿದೆ. 

ಕಳೆದ 24 ಗಂಟೆಗಳಲ್ಲಿ 47,000+ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 15.83 ಲಕ್ಷ ಆಗಿದ್ದು, 6.39 ಲಕ್ಷ ಸೋಂಕಿತರು ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಗುಣಮುಖ ಪ್ರಮಾಣ 69.80% ಇದೆ. ಇದು ಜಾಗತಿಕ ಗುಣಮುಖ ಪ್ರಮಾಣವಾದ 61%ಗಿಂತಲೂ ಹೆಚ್ಚು. ದೇಶದಲ್ಲಿ ಸಾವಿನ ಪ್ರಮಾಣವು 1.99% ಇದೆ. ಇದು ಜಾಗತಿಕ ಸಾವಿನ ಪ್ರಮಾಣವಾದ 3.66%ಗಿಂತಲೂ ಕಡಿಮೆ

ಆಗಸ್ಟ್​ 10ರಂದು ದೇಶದಲ್ಲಿ 6.98 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 2.52 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ತಿಳಿಸಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 1.48 ಲಕ್ಷ ಪ್ರಕರಣ (18,000+ ಸಾವು)

2. ಆಂಧ್ರಪ್ರದೇಶ: 87,000+ ಪ್ರಕರಣ (2,100+ ಸಾವು)

3. ಕರ್ನಾಟಕ: 79,000+ ಪ್ರಕರಣ (3,300+ ಸಾವು)

4. ತಮಿಳುನಾಡು: 53,000+ ಪ್ರಕರಣ (5,000+ ಸಾವು)

5. ಉತ್ತರಪ್ರದೇಶ: 47,000+ ಪ್ರಕರಣ (2,100+ ಸಾವು)

6. ಬಿಹಾರ: 28,000+ ಪ್ರಕರಣ (397 ಸಾವು)

7. ಪಶ್ಚಿಮ ಬಂಗಾಳ: 26,000+ ಪ್ರಕರಣ (2,100+ ಸಾವು)

8. ತೆಲಂಗಾಣ: 22,000+ ಪ್ರಕರಣ (645 ಸಾವು)

9. ಅಸ್ಸಾಂ: 18,000+ ಪ್ರಕರಣ (151 ಸಾವು)

10. ಒಡಿಶಾ: 14,000+ ಪ್ರಕರಣ (286 ಸಾವು)

-masthmagaa.com

Contact Us for Advertisement

Leave a Reply