ಈ ರಾಜ್ಯದಲ್ಲಿ ಮಾಸ್ಕ್ ಧರಿಸದೆ ಓಡಾಡಿದ್ರೆ ಬೀಳುತ್ತೆ ₹1 ಲಕ್ಷ ದಂಡ..!

masthmagaa.com:

ದೇಶದಲ್ಲಿ ಮಾರಣಾಂತಿಕ ಕೊರೋನಾ ವೈರಸ್​ಗೆ ಸಾವಿರಾರು ಜನ ಮೃತಪಟ್ಟರೂ ಕೆಲವರಿಗೆ ಇನ್ನೂ ಪರಿಸ್ಥಿತಿಯ ಗಂಭೀರತೆ ಅರ್ಥವಾಗ್ತಿಲ್ಲ. ಸರ್ಕಾರ ಜಾರಿಗೆ ತಂದಿರುವ ನಿಯಮಗಳನ್ನ ಗಾಳಿಗೆ ತೂರಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಓಡಾಡುತ್ತಿದ್ದಾರೆ. ಇಂತಹವರಿಗೆ ಬಿಸಿ ಮುಟ್ಟಿಸಲು ಜಾರ್ಖಂಡ್​ನ ಹೇಮಂತ್ ಸೋರೆನ್​ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಜಾರ್ಖಂಡ್​ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ ಬರೋಬ್ಬರಿ 1 ಲಕ್ಷ ರೂಪಾಯಿ ದಂಡ ವಿಧಿಸುವ ಕಾನೂನನ್ನು ಜಾರಿಗೆ ತರಲಾಗಿದೆ. ಜೊತೆಗೆ ಕೊವಿಡ್-19 ನಿಯಮಗಳನ್ನು ಉಲ್ಲಂಘಿಸಿದರೆ 2 ವರ್ಷ ಜೈಲು ಶಿಕ್ಷೆ ವಿಧಿಸುವ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ-2020ನ್ನು ಜಾರ್ಖಂಡ್ ಸಚಿವ ಸಂಪುಟ ಪಾಸ್ ಮಾಡಿದೆ. ಜಾರ್ಖಂಡ್​ನಲ್ಲಿ ಇದುವರೆಗೆ ಸುಮಾರು 6,500 ಜನರಿಗೆ ಸೋಂಕು ತಾಗಿದ್ದು, 64 ಸೋಂಕಿತರು ಮೃತಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply