masthmagaa.com:

ಬಾಲಿವುಡ್​ ನಟಿ ಕಂಗನಾ ರನಾವತ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಿನ ಸಂಘರ್ಷದ ನಡುವೆಯೇ ಮುಂಬೈನಲ್ಲಿರುವ ಕಂಗನಾ ಅವರ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆ ಕೆಡವಲು ಶುರು ಮಾಡಿದೆ. ಜೆಸಿಬಿಗಳೊಂದಿಗೆ ಬಂದಿರುವ ಅಧಿಕಾರಿಗಳು ಕಚೇರಿಯ ಗೋಡೆಗಳನ್ನು ಒಡೆಯುತ್ತಿದ್ದಾರೆ. ಪೂರ್ತಿ ಕಟ್ಟಡವನ್ನಲ್ಲ, ಬದಲಿಗೆ ಮಾಸ್ಟರ್ ಪ್ಲಾನ್ ಉಲ್ಲಂಘಿಸಿ ಕಂಗನಾ ಮಾಡಿಕೊಂಡಿದ್ದ ಕೆಲವೊಂದಿಷ್ಟು ಮಾರ್ಪಾಟುಗಳನ್ನ ಕೆಡವಲಾಗ್ತಿದೆ.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಂಗನಾ ರನಾವತ್, ಮುಂಬೈ ಅನ್ನು ಮತ್ತೊಮ್ಮೆ ಪಾಕ್ ಆಕ್ರಮಿತ ಕಾಶ್ಮೀರ, ಪಾಕಿಸ್ತಾನ ಅಂತೆಲ್ಲಾ ಕರೆದಿದ್ದಾರೆ. ಜೊತೆಗೆ ಮಹಾರಾಷ್ಟ್ರ ಸರ್ಕಾರವನ್ನು ‘ಬಾಬರ್ ಮತ್ತು ಅವರ ಸೇನೆ’ ಅಂತ ಜರಿದಿದ್ದಾರೆ.

‘ನಾನು ಮುಂಬೈನ ದರ್ಶನ ಪಡೆಯಲು ಹೊರಟಿರುವ ನಡುವೆಯೇ ಮಹಾರಾಷ್ಟ್ರ ಸರ್ಕಾರ ಮತ್ತು ಅವರ ಗೂಂಡಾಗಳು ನನ್ನ ಕಚೇರಿಯನ್ನು ಅಕ್ರಮವಾಗಿ ಕೆಡವಲು ಮುಂದಾಗಿದ್ದಾರೆ. ಇದು ಏನೂ ಅಲ್ಲ. ಎಲ್ಲವನ್ನೂ ಕಿತ್ತುಕೊಳ್ಳಿ. ಆದ್ರೆ ನನ್ನ ಸ್ಪಿರಿಟ್ ಹೆಚ್ಚಾಗ್ತಾನೇ ಹೋಗುತ್ತೆ’ ಅಂತ ಕಂಗನಾ ರನಾವತ್ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply