ವಿಡಿಯೋ: ಕಂಗನಾ ರನಾವತ್​ಗೆ ನೀಡಿದ ಬಿಗಿ ಭದ್ರತೆ ಹೇಗಿದೆ ನೋಡಿ

masthmagaa.com:

ಬಾಲಿವುಡ್ ನಟಿ ಕಂಗನಾ ರನಾವತ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಿನ ಸಂಘರ್ಷದ ನಡುವೆಯೇ ಇವತ್ತು ಕಂಗನಾ ರನಾವತ್ ಮುಂಬೈಗೆ ಆಗಮಿಸಲಿದ್ದಾರೆ. ಮುಂಬೈ ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸುವ ರೀತಿಯಲ್ಲಿ ಟ್ವೀಟ್ ಮಾಡಿದ್ದ ಕಂಗನಾ ವಿವಾದಕ್ಕೆ ಕಾರಣವಾಗಿದ್ರು. ಇದಕ್ಕೆ ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆಯಿಂದ ಭಾರಿ ಟೀಕೆ ವ್ಯಕ್ತವಾಗಿತ್ತು. ಸಾಕಷ್ಟು ಬೆದರಿಕೆ ಕೂಡ ಹಾಕಲಾಗಿತ್ತು.

ಇದರ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ ಕಂಗನಾಗೆ Y+ ಶ್ರೇಣಿಯ ಭದ್ರತೆ ನೀಡಿತ್ತು. ಅದು ಹೇಗಿರುತ್ತೆ ಅಂತ ಎಲ್ಲರಿಗೂ ಕುತೂಹಲವಿತ್ತು. ಇದೀಗ ಮೊಹಾಲಿ ಏರ್​ಪೋರ್ಟ್​ನಲ್ಲಿ ಕಂಗನಾ Y+ ಭದ್ರತೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರಿಗೆ ಸುಮಾರು 10ರಿಂದ 12 ಮಂದಿ ಸಿಬ್ಬಂದಿ ಬಿಗಿ ಭದ್ರತೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply