ರಾಜ್ಯಕ್ಕೆ ಕೇರಳದ ಆಂಬ್ಯುಲೆನ್ಸ್​​ಗಳು ಬರಲು ಅನುಮತಿ..!

masthmagaa.com:

ರಾಜ್ಯಸರ್ಕಾರ ಕೇರಳದೊಂದಿಗಿನ ಗಡಿಯನ್ನು ಬಂದ್ ಮಾಡಿದ್ದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಆಂಬ್ಯುಲೆನ್ಸ್​​​ಗಳಿಗೂ ಓಡಾಡಲು ಸಾಧ್ಯವಾಗ್ತಿಲ್ಲ ಅನ್ನೋ ಆರೋಪ ಕೇಳಿಬಂದಿತ್ತು. ಇದೀಗ ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸಿ ಆಂಬ್ಯುಲೆನ್ಸ್ ಮೂಲಕ ರೋಗಿಗಳನ್ನು ಕೇರಳದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಕರ್ನಾಟಕ ಒಪ್ಪಿಗೆ ನೀಡಿದೆ. ಹೀಗಂತ ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ.

ಆದ್ರೆ ಕೊರೋನಾ ಸೋಂಕು ಇರುವ ರೋಗಿಗಳನ್ನು ಒಳಗೆ ಬಿಡಲಾಗುವುದಿಲ್ಲ. ಕರ್ನಾಟಕದ ವೈದ್ಯರ ತಂಡವೊಂದು ತಲಪಾಡಿ ಚೆಕ್​ಪೋಸ್ಟ್​​ನಲ್ಲಿ ರೋಗಿಗಳ ತಪಾಸಣೆ ನಡೆಸಲಿದೆ  ಅಂತ ಮಾಹಿತಿ ಲಭ್ಯವಾಗಿದೆ.

ಗಡಿ ತೆರೆಯಬೇಕು ಎಂಬ ವಿಚಾರದಲ್ಲಿ ಕರ್ನಾಟಕ ಮತ್ತು ಕೇರಳದ ನಡುವೆ ಪತ್ರ ವ್ಯವಹಾರದಿಂದ ಹಿಡಿದು ನ್ಯಾಯಾಂಗ ಹೋರಾಟ ಕೂಡ ನಡೆದಿತ್ತು. ಆದ್ರೆ ಸಿಎಂ ಯಡಿಯೂರಪ್ಪ ಮಾತ್ರ ಗಡಿ ತೆರೆಯಲು ಸಾಧ್ಯವೇ ಇಲ್ಲ ಎಂದಿದ್ದರು. ಆದ್ರೀಗ ಬೇರೆ ರೋಗಿಗಳ ಆರೋಗ್ಯದ ದೃಷ್ಟಿಯಿಂದ ರಾಜ್ಯಕ್ಕೆ ಆಂಬ್ಯುಲೆನ್ಸ್ ಪ್ರವೇಶಕ್ಕೆ ಅನುಮತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply