ರಾಜ್ಯದಲ್ಲಿ ದಾಖಲೆ ಮುರಿದ ಕೊರೋನಾ..! ಒಂದೇ ದಿನ 44 ಮಂದಿಗೆ ಸೋಂಕು..!

masthmagaa.com:

ಆಘಾತಕಾರಿ ಬೆಳವಣಿಗೆಯಲ್ಲಿ ಕರ್ನಾಟಕದಲ್ಲಿ ಇಂದು ಒಂದೇ ದಿನ 44 ಹೊಸ ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಕರ್ನಾಟಕದಲ್ಲಿ ಒಟ್ಟು ಕಾಯಿಲೆ ಪೀಡಿತರ ಸಂಖ್ಯೆ 359ಕ್ಕೆ ಏರಿಕೆಯಾಗಿದೆ.

ಇಂದು ಬೆಳಗ್ಗೆಯಷ್ಟೇ ರಾಜ್ಯದಲ್ಲಿ 38 ಹೊಸ ಪ್ರಕರಣಗಳು ವರದಿಯಾಗಿದ್ದವು. ಆದ್ರೆ ಈಗ ಮತ್ತೆ 6 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬೆಳಗಾವಿಯ ಐವರು ಮತ್ತು ಬೆಂಗಳೂರಿನ ಒಬ್ಬರಲ್ಲಿ ಈಗ ಹೊಸದಾಗಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಒಂದೇ ದಿನ ಇಷ್ಟು ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿರೋದು ಇದೇ ಮೊದಲು..

ಇಂದು ಬೆಳಗ್ಗೆ ಮೈಸೂರಲ್ಲಿ 12, ಬೆಂಗಳೂರು ನಗರದಲ್ಲಿ 9 ಪ್ರಕರಣಗಳು ದೃಢಪಟ್ಟಿದ್ದವು. ಬಳ್ಳಾರಿಯಲ್ಲಿ 7, ಮಂಡ್ಯ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ 3 ಪ್ರಕರಣಗಳು, ವಿಜಯಪುರದಲ್ಲಿ 2 ಹಾಗೂ ದಕ್ಷಿಣಕನ್ನಡ ಮತ್ತು ಬೀದರ್‌ನಿಂದ ತಲಾ 1 ಪ್ರಕರಣ ವರದಿಯಾಗಿದ್ದವು.

-masthmagaa.com

Contact Us for Advertisement

Leave a Reply