ಬೆಂಗಳೂರಿನಲ್ಲಿ 100ಕ್ಕೇರಿದ ಕೊರೋನಾಪೀಡಿತರ ಸಂಖ್ಯೆ..!

masthmagaa.com:

ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆವರೆಗೆ 16 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 443ಕ್ಕೆ ಏರಿಕೆಯಾಗಿದೆ.

ಇಂದು ಸೋಂಕು ಪತ್ತೆಯಾದವರಲ್ಲಿ 9 ಮಂದಿ ಬೆಂಗಳೂರಿನವರೇ ಆಗಿರೋದು ಆತಂಕ ಮೂಡಿಸಿದೆ. ಬಿಹಾರ ಮೂಲದ ಸೋಂಕಿತನೊಬ್ಬನಿಂದ 9 ಮಂದಿಗೆ ಸೋಂಕು ಹರಡಿದೆ ಅಂತ ತಿಳಿದು ಬಂದಿದೆ. ಇನ್ನೊಂದು ವಿಚಾರ ಅಂದ್ರೆ ಬೆಂಗಳೂರಲ್ಲಿ ಈವರೆಗೆ ಒಟ್ಟು 100 ಮಂದಿಗೆ ಸೋಂಕು ಪತ್ತೆಯಾದಂತಾಗಿದೆ.

ಇನ್ನುಳಿದಂತೆ ವಿಜಯಪುರ, ಮಂಡ್ಯ, ಧಾರವಾಡದ ತಲಾ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಜೊತೆಗೆ ದಕ್ಷಿಣ ಕನ್ನಡದ ಒಬ್ಬರಲ್ಲೂ ಈ ಮಹಾಮಾರಿ ದೃಢಪಟ್ಟಿದೆ.

ರಾಜ್ಯದಲ್ಲಿ ಈವರೆಗೆ 17 ಮಂದಿ ಮೃತಪಟ್ಟಿದ್ದು, 141 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

-masthmagaa.com

Contact Us for Advertisement

Leave a Reply