ವೈದ್ಯರ ರಕ್ಷಣೆಗೆ ಹೈಟೆಕ್ ತಂತ್ರಜ್ಞಾನಕ್ಕೆ ಮೊರೆ ಹೋದ ಕರ್ನಾಟಕ

masthmagaa.com:

ಬೆಂಗಳೂರು: ದೇಶದಲ್ಲಿ ಕೊರೋನಾ ವೈರಸ್ ಹಾವಳಿ ಜೋರಾಗಿದೆ. ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೂ ಸೊಂಕು ತಗುಲುತ್ತಿರುವ ಪ್ರಕರಣಗಳು ಕೂಡ ಹೆಚ್ಚಾಗ್ತಿದೆ. ರಾಜ್ಯದಲ್ಲೂ ಈವರೆಗೆ ಇಬ್ಬರು ವೈದ್ಯರಿಗೆ ಕೊರೋನಾ ತಗುಲಿರೋದು ಬೆಳಕಿಗೆ ಬಂದಿದೆ. ಹೀಗಾಗಿ ವೈದ್ಯರ ಆರೋಗ್ಯದ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಅದೇ ರಿಮೋಟ್ ಮಾನಿಟರಿಂಗ್.. ಈ ವ್ಯವಸ್ಥೆಯಲ್ಲಿ ವಾರ್ಡ್​ನಲ್ಲಿ ಕೆಲವೇ ಕೆಲವು ವೈದ್ಯರು ಇರುತ್ತಾರೆ. ಉಳಿದಂತೆ ತಜ್ಞ ವೈದ್ಯರು ಬೇರೆ ಸ್ಥಳದಲ್ಲಿ ಕುಳಿತು ಕೊರೋನಾ ಪೀಡಿತರ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದು, ಸಲಹೆ ನೀಡುತ್ತಾರೆ. ಈ ತಂತ್ರಜ್ಞಾನದ ಮೂಲಕ ವಾರ್ಡ್​ನಲ್ಲಿ ಹೆಚ್ಚು ವೈದ್ಯರು ಸೇರೋದನ್ನ ತಪ್ಪಿಸಬಹುದು ಅನ್ನೋದು ಸರ್ಕಾರದ ಉದ್ದೇಶವಾಗಿದೆ.

ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಈಗಾಗಲೇ ಅಮೆರಿಕದಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಂಡಿರೋ ವೈದ್ಯರನ್ನು ಸಂಪರ್ಕಿಸಿದ್ದಾರೆ. ಜೊತೆಗೆ ಈ ತಂತ್ರಜ್ಞಾನ ನಿರ್ಮಿಸೋ ಕಂಪನಿಗಳ ಜೊತೆಗೂ ಸುಧಾಕರ್ ಮಾತನಾಡಿದ್ದಾರೆ. ಸದ್ಯದಲ್ಲೇ ಈ ತಂತ್ರಜ್ಞಾನವನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply