masthmagaa.com:

ರಾಜ್ಯದಲ್ಲಿ ಇಂದು 1,350 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 18 ಜನ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,37,427 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 37,123 ಆಗಿದೆ. ಇಂದು 1,648 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 28,79,433 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 20,845 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 1.57 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 4.18 ಕೋಟಿಗೂ ಹೆಚ್ಚು ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 3.66 ಕೋಟಿಗೂ ಹೆಚ್ಚು ಡೋಸ್ ಕೊರೋನಾ ಲಸಿಕೆ ಹಾಕಲಾಗಿದೆ.

ಇಂದು ಮೃತಪಟ್ಟವರು:

ದಕ್ಷಿಣ ಕನ್ನಡ 4
ಹಾಸನ 2
ಕೋಲಾರ 2
ಶಿವಮೊಗ್ಗ 2
ಬಳ್ಳಾರಿ 1
ಬೆಳಗಾವಿ 1
ಬೆಂಗಳೂರು ಗ್ರಾಮಾಂತರ 1
ಬೆಂಗಳೂರು ನಗರ 1
ದಾವಣಗೆರೆ 1
ಹಾವೇರಿ 1
ಮೈಸೂರು 1
ರಾಮನಗರ 1

-masthmagaa.com

 

Contact Us for Advertisement

Leave a Reply