ಕ್ವಾರಂಟೈನ್​​ ನಿಯಮ ಉಲ್ಲಂಘಿಸಿದ ಐಎಎಸ್ ಅಧಿಕಾರಿ ವಿರುದ್ಧ ಕೇಸ್​..!

masthmagaa.com:

ಕೇರಳ: ಕ್ವಾರಂಟೈನ್​ನಲ್ಲಿದ್ದ ಐಎಎಸ್ ಅಧಿಕಾರಿಯೊಬ್ಬರು ನಿಯಮ ಉಲ್ಲಂಘಿಸಿ ಹೊರಗೆ ಬಂದಿದ್ದು, ಅವರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಕೇರಳದ ಕೊಲ್ಲಂನ ಉಪ ಜಿಲ್ಲಾಧಿಕಾರಿಯಾಗಿದ್ದ ಅನುಪಮ್ ಮಿಶ್ರಾ ಅವರನ್ನು ಕ್ವಾರಂಟೈನ್​​​ನಲ್ಲಿ ಇರಿಸಲಾಗಿತ್ತು. ಅಲ್ಲದೆ 14 ದಿನಗಳ ಕಾಲ ಮನೆಯಲ್ಲೇ ಇರುವಂತೆ ಸೂಚಿಸಲಾಗಿತ್ತು. ಆದ್ರೆ ಅವರು ಸರ್ಕಾರಕ್ಕೆ ತಿಳಿಸದೇ ಉತ್ತರ ಪ್ರದೇಶದ ಕಾನ್ಪುರದಲ್ಲಿರೋ ತಮ್ಮ ಮನೆಗೆ ತೆರಳಿದ್ದು, ನಿಯಮ ಉಲ್ಲಂಘಿಸಿದ್ದಾರೆ.

ಅನುಪಮ್ ಮಿಶ್ರಾ ಇತ್ತೀಚೆಗಷ್ಟೇ ಸಿಂಗಾಪುರ್ ಟೂರ್​​ಗೆ ಹೋಗಿ ಬಂದಿದ್ದರಿಂದ, 14 ದಿನಗಳ ಕಾಲ ಮನೆಯಲ್ಲಿ ಇರಿ ಅಂತ  ಮಾರ್ಚ್​ 19ರಂದು ಸೂಚಿಸಲಾಗಿತ್ತು. ಆದ್ರೆ ಭಾರತ ಲಾಕ್​ಡೌನ್ ಘೋಷಣೆಗೂ ಒಂದು ದಿನ ಮುನ್ನ  ಅಂದ್ರೆ ಮಾರ್ಚ್​ 23ರಂದು ಅನುಪಮ್ ಮಿಶ್ರಾ ಯಾರಿಗೂ ಹೇಳದೇ ಕಾನ್ಪುರಕ್ಕೆ ಹೋಗಿದ್ದಾರೆ.

ನಂತರ ಅನುಪಮ್​ ಮಿಶ್ರಾ ಕರೆಗಳಿಗೆ ಪ್ರತಿಕ್ರಿಯಿಸದೇ ಇದ್ದಾಗ ಪೊಲೀಸರು ಲೊಕೇಷನ್ ಟ್ರೇಸ್ ಮಾಡಿದ್ದಾರೆ. ಈ ವೇಳೆ ಅನುಪಮ್​ ಉತ್ತರ ಪ್ರದೇಶದ ಕಾನ್ಪುರದಲ್ಲಿದ್ದಾರೆ ಅನ್ನೋದು ತಿಳಿದುಬಂದಿದೆ.

-masthmagaa.com

Contact Us for Advertisement

Leave a Reply