masthmagaa.com:

ಕೊರೋನಾ ವೈರಸ್ ಆರ್ಭಟಕ್ಕೆ ಅಮೆರಿಕ ನ್ಯೂಯಾರ್ಕ್​ ಅಕ್ಷರಶಃ ನರಕದಂತಾಗಿದೆ. ಅಮೆರಿಕದಲ್ಲಿ ದೃಢಪಟ್ಟ 1 ಲಕ್ಷ ಪ್ರಕರಣಗಳಲ್ಲಿ 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ನ್ಯೂಯಾರ್ಕ್​​ನಲ್ಲೇ ವರದಿಯಾಗಿವೆ. ಅಲ್ಲದೆ 450ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೆ ನ್ಯೂಯಾರ್ಕ್​ ಪೊಲೀಸ್​ ಡಿಪಾರ್ಟ್​ಮೆಂಟ್​ನ 550 ಜನ ಪೊಲೀಸರಿಗೂ ಸೋಂಕು ತಗುಲಿರೋದು ಆತಂಕ ಹೆಚ್ಚುವಂತೆ ಮಾಡಿದೆ.

ಗುರುವಾರ ಸಂಜೆ ವೇಳೆಗೆ 350 ಪೊಲೀಸರಲ್ಲಿ ಸೋಂಕು ದೃಢಪಟ್ಟಿತ್ತು. ಆದ್ರೆ ಶುಕ್ರವಾರ ಸಂಜೆ ವೇಳೆಗೆ ಈ ಸಂಖ್ಯೆ 550ಕ್ಕೆ ಏರಿಕೆಯಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಅಂದ್ರೆ ಒಂದೇ ದಿನದಲ್ಲಿ ಸುಮಾರು 200 ಪೊಲೀಸರಿಗೆ ಸೋಂಕು ತಗುಲಿದಂತಾಗಿದೆ. ಅಲ್ಲದೆ ಇತ್ತೀಚೆಗಷ್ಟೇ ನ್ಯೂಯಾರ್ಕ್​ ಪೊಲೀಸ್​ ಡಿಪಾರ್ಟ್​ಮೆಂಟ್​ನ ಸಿಬ್ಬಂದಿಯೊಬ್ಬರು ಕೊರೋನಾಗೆ ಬಲಿಯಾಗಿದ್ದರು.

ಇನ್ನು ಇದುವರೆಗೆ 3,700ಕ್ಕೂ ಹೆಚ್ಚು ಪೊಲೀಸರು ಅನಾರೋಗ್ಯಕ್ಕೆ ತುತ್ತಾಗಿದ್ದು, ಸೇವೆಯಿಂದ ದೂರ ಉಳಿದಿದ್ದಾರೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply