ಭೂಮಿಯ ಎಲ್ಲಾ ಖಂಡಗಳು ಕೂಡಿ ʻಸೂಪರ್‌ ಕಾಂಟಿನೆಂಟ್‌ʼ ಜನ್ಮ ತಾಳುತ್ತಾ?

masthmagaa.com:

ಭೂಮಿಯಲ್ಲಿರುವ ಎಲ್ಲಾ ಖಂಡಗಳು ಮರ್ಜ್‌ ಆಗಲಿವೆ ಅಂತ ವಿಜ್ಞಾನಿಯೊಬ್ರು ತಮ್ಮ ನೂತನ ʻThe Next Super Continentʼ ಅನ್ನೋ ಪುಸ್ತಕದಲ್ಲಿ ವಿವರಿಸಿದ್ದಾರೆ. ಭೂಮಿಯ ಕ್ರಸ್ಟ್‌ ಹಾಗೂ ಕೋರ್‌ ನಡುವೆ ಇರುವ ಮ್ಯಾಂಟಲ್‌ನಲ್ಲಿ ಶಾಖ ಹೆಚ್ಚಾದಾಗ ಕಾಂಟಿನೆಂಟ್‌ಗಳ ಚಲನೆ ಉಂಟಾಗುತ್ತೆ. ಇತರ ಭಾಗಗಳಿಗಿಂತ ಕೂಲ್‌ ಆಗಿರುವ ಮ್ಯಾಂಟಲ್‌ನ ಪ್ರದೇಶದ ಕಡೆ ಖಂಡಗಳು ಚಲಿಸುತ್ತವೆ, ಈ ರೀತಿ ಹೊಸ ಸೂಪರ್‌ ಕಾಂಟಿನೆಂಟ್‌ನ ಉಗಮಕ್ಕೆ ಆಗಲಿದೆ ಅಂತ ಪುಸ್ತಕದಲ್ಲಿ ಜಿಯೋಫಿಸಿಸಿಸ್ಟ್‌ ರಾಸ್‌ ಮಿಚೆಲ್‌ ಅವ್ರು ವಿವರಿಸಿದ್ದಾರೆ. ಜೊತೆಗೆ ಈ ನೂತನ ಕಾಂಟಿನೆಂಟ್‌ಗೆ ʻಅಮಾಸಿಯಾʼ ಅಂತ ಹೆಸರಿಡಲಾಗಿದೆ. ರಾಸ್‌ ಅವ್ರ ಪ್ರೆಡಿಕ್ಷನ್‌ ಪ್ರಕಾರ ಉತ್ತರ ಅಮೆರಿಕ ಹಾಗೂ ಏಷ್ಯಾ ಖಂಡಗಳು ಮರ್ಜ್‌ ಆಗಿ ʻಅಮಾಸಿಯಾʼ ರೂಪುಗೊ‍ಳ್ಳಲಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply