ಮುಂದಿನ ಐಪಿಎಲ್​​ನಲ್ಲಿ ಹೆಚ್ಚುತ್ತಾ ತಂಡಗಳ ಸಂಖ್ಯೆ..?

masthmagaa.com:

ದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ವಿಸ್ತರಿಸಲು ಇದು ಸರಿಯಾದ ಸಮಯ. ಟೂರ್ನಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ದೇಶದಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟ ಹಾಗೂ ಯುವ ಪ್ರತಿಭೆಗಳನ್ನ ಬಳಸಿಕೊಂಡು ಟೂರ್ನಿಯನ್ನು ವಿಸ್ತರಿಸಬಹುದಾಗಿದೆ ಅಂತ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಸೂಕ್ತ ಅವಕಾಶ ದೊರೆಯದೇ ಇರುವ ಟ್ಯಾಲೆಂಟೆಡ್‌ ಆಟಗಾರರು ಬಹಳಷ್ಟಿದ್ದಾರೆ. ಹೀಗಾಗಿ ತಂಡಗಳ ಸಂಖ್ಯೆಯನ್ನ ಹೆಚ್ಚು ಮಾಡಿದ್ರೆ, ಮತ್ತಷ್ಟು ಹೊಸ ಮುಖಗಳಿಗೆ ಅವಕಾಶ ಲಭಿಸಲಿದೆ ಅಂತ ಹೇಳಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕ ಮನೋಜ್ ಬಾದಲೆ ಬರೆದಿರುವ ‘ಎ ನ್ಯೂ ಇನ್ನಿಂಗ್ಸ್’ ಪುಸ್ತಕ ಬಿಡುಗಡೆ ವೇಳೆ ದ್ರಾವಿಡ್ ಈ ರೀತಿ ಹೇಳಿದ್ದಾರೆ. ಈಗಿರುವ 8 ತಂಡಗಳ ಬದಲಾಗಿ 2021ರ ಐಪಿಎಲ್‌ಗೆ 9 ಟೀಮ್‌ ಇರುತ್ತೆ ಅನ್ನೋ ಮಾತು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಆದ್ರೆ ಬಿಸಿಸಿಐ 2023ರ ವೇಳೆಗೆ 10 ಐಪಿಎಲ್‌ ಟೀಮ್‌ಗಳನ್ನ ರೂಪಿಸುವ ಯೋಜನೆ ಹಾಕಿಕೊಂಡಿದೆ.

-masthmagaa.com

Contact Us for Advertisement

Leave a Reply