ಗಲ್ವಾನ್ ಘರ್ಷಣೆಯಲ್ಲಿ ಚೀನೀ ಸೈನಿಕರನ್ನು ಬಗ್ಗು ಬಡಿದಿತ್ತು ಭಾರತ..! ಸಿಕ್ಕಿದೆ ಸಾಕ್ಷ್ಯ

masthmagaa.com:

ಚೀನಾ: ಗಲ್ವಾನ್ ಕಣಿವೆಯಲ್ಲಿ ನಡೆದಿದ್ದ ಘರ್ಷಣೆ ವೇಳೆ ಭಾರತೀಯ ಯೋಧರು ಚೀನೀ ಯೋಧರಿಗೆ ತಕ್ಕ ತಿರುಗೇಟು ನೀಡಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಒಂದು ಸಮಾಧಿ ಮತ್ತು ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ಫೋಟೋಗಳು ಹರಿದಾಡ್ತಿವೆ. ಚೀನಾದ ಸೋಷಿಯಲ್ ಮೀಡಿಯಾ ಸೈಟ್​ ವೀಬೋ ಬಳಕೆದಾರರು ಚೀನೀ ಸೈನಿಕ ಚೆನ್ ಜಿಯಾಂಗ್​ರೊಂಗ್ ಸಾವು ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆ ವೇಳೆ ಸಂಭವಿಸಿತ್ತು. ಅವರನ್ನೇ ನಂತರದಲ್ಲಿ ಸಮಾಧಿ ಮಾಡಲಾಗಿದೆ ಅಂತ ವಾದಿಸುತ್ತಿದ್ದಾರೆ. ಚೀನಾದ ಸೆಂಟ್ರಲ್ ಮಿಲಿಟರಿ ಕಮಿಷನ್ ವತಿಯಿಂದ ನಿರ್ಮಿಸಲಾಗಿರೋ ಈ  ಸಮಾಧಿಯಲ್ಲಿ ಚೆನ್ ಜಿಯಾಂಗ್​​ರೊಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಮತ್ತೊಂದು ಫೋಟೋದಲ್ಲಿ ಚೀನಾ ಯೋಧನ ತಲೆಗೆ ಗಂಭೀರ ಗಾಯವಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಆದ್ರೆ ಈ ಫೋಟೋಗಳು ಮತ್ತು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಚೀನಾ ಸರ್ಕಾರ ಇನ್ನು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

-masthmagaa.com

Contact Us for Advertisement

Leave a Reply