ನೀವಿಲ್ಲದೆ ದೀಪಾವಳಿ ಕಂಪ್ಲೀಟ್ ಆಗಲ್ಲ: ಯೋಧರ ಜೊತೆ ಮೋದಿ ಮಾತು

masthmagaa.com:

ರಾಜಸ್ಥಾನ: ಪ್ರಧಾನಿ ಮೋದಿಯವರು ರಾಜಸ್ಥಾನದ ಜೈಸಲ್ಮೇರ್​​​​​​​​ ಗಡಿಯಲ್ಲಿ ಬಿಎಸ್​ಎಫ್​​​ ಯೋಧರೊಂದಿಗೆ ದೀಪಾವಳಿ ಆಚರಿಸಿದ್ರು. ಈ ವೇಳೆ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ವೀರರೇ..ನಿಮಗೆ ನನ್ನ ಮತ್ತು 130 ಕೋಟಿ ಜನತೆಯ ಕಡೆಯಿಂದ ದೀಪಾವಳಿ ಹಬ್ಬದ ಶುಭಾಶಯಗಳು..ನೀವು ಇದ್ದರೆ ದೇಶ ಇದೆ. ಈಗ ದೇಶದಲ್ಲಿ ಹಬ್ಬವಿದೆ. ಹೀಗಾಗಿ ಇಡೀ ದೇಶದ ಪ್ರತಿಯೊಬ್ಬರ ಶುಭಾಶಯ ಹೊತ್ತು ತಂದಿದ್ದೇನೆ. ದೇಶದ ಜನತೆಯ ಪ್ರೀತಿ ಹೊತ್ತು ತಂದಿದ್ದೇನೆ. ಹಿರಿಯರ ಆಶೀರ್ವಾದ ಹೊತ್ತು ತಂದಿದ್ದೇನೆ ಅಂದ್ರು. ನೀವು ಹಿಮಾಲಯದಲ್ಲೇ ಇರಿ.. ಮರುಭೂಮಿಯಲ್ಲೇ ಇರಿ.. ನನ್ನ ದೀಪಾವಳಿ ನಿಮ್ಮ ನಡುವೆ ಬಂದ ಬಳಿಕವೇ ಪೂರ್ಣಗೊಳ್ಳುತ್ತದೆ. ನಿಮ್ಮ ಮುಖದ ಹೊಳಪು ನೋಡಿದಾಗ ನನ್ನ ಸಂತೋಷ ಹೆಚ್ಚುತ್ತೆ. ದೇಶದ ಉಲ್ಲಾಸವನ್ನು ನಿಮಗೆ ತಲುಪಿಸಲು ಇಲ್ಲಿಯವರೆಗೆ ಬಂದಿದ್ದೇನೆ. ಸಿಹಿಯನ್ನು ಕೂಡ ಹೊತ್ತು ತಂದಿದ್ದೇನೆ ಅಂದ್ರು.

ಇದೇ ವೇಳೆ ನೆರೆಯ ವೈರಿ ದೇಶಗಳಿಗೆ ಎಚ್ಚರಿಕೆ ಕೊಡೋದಕ್ಕೂ ಕೂಡ ಪ್ರಧಾನಿ ಮೋದಿ ಮರೆಯಲಿಲ್ಲ.. ಈಗ ಭಾರತ ಉಗ್ರರ ಮನೆಗೆ ನುಗ್ಗಿ ಹೊಡೆಯುತ್ತಿದೆ. ದೇಶದ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಅಂದ್ರು. ಜಗತ್ತಿನಲ್ಲಿ ವಿಸ್ತರಣಾವಾದ ಹೆಚ್ಚುತ್ತಿದೆ. ಆದ್ರೆ ಭಾರತ ಈಗ ಅರ್ಥ ಮಾಡಿಕೊಳ್ಳುವ ಮತ್ತು ಅರ್ಥ ಮಾಡಿಸುವ ನೀತಿಯನ್ನು ಅನುಸರಿಸುತ್ತಿದೆ. ಆದ್ರೆ ನಮ್ಮ ತಾಳ್ಮೆ ಪರೀಕ್ಷೆ ಮಾಡೋಕೆ ಬಂದ್ರೆ ಅದರ ಪರಿಣಾಮ ಕೂಡ ಗಂಭೀರವಾಗಿಯೇ ಇರುತ್ತೆ ಅಂತ ಪರೋಕ್ಷವಾಗಿ ಚೀನಾಗೆ ಎಚ್ಚರಿಸಿದ್ರು.

-masthmagaa.com

Contact Us for Advertisement

Leave a Reply