masthmagaa.com:

ಪಶ್ಚಿಮ ಬಂಗಾಳದ ಕದನಕಣದಲ್ಲಿ ಪ್ರಧಾನಿ ಮೋದಿ ದುರ್ಗಾಪೂಜೆಯ ರಣಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ. ಈ ದುರ್ಗಾಪೂಜೆಯೇ ಈಗ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬದ್ಧ ವಿರೊಧಿ ಬಿಜೆಪಿ ನಡುವೆ ಮತ್ತೆ ರಾಜಕೀಯ ಯುದ್ಧ ಭೂಮಿಯಾಗಿ ಪರಿವರ್ತನೆಯಾಗುವ ಎಲ್ಲಾ ಲಕ್ಷಣ ಗೋಚರವಾಗುತ್ತಿದೆ. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯಿಂದ ದುರ್ಗಾ ಪೂಜೆಯನ್ನ ಉದ್ಘಾಟಿಸಲು ಬಿಜೆಪಿ ಪ್ಲಾನ್ ಮಾಡಿದೆ.

ಕಳೆದ ವರ್ಷ ಕೋಲ್ಕತ್ತಾ ಸಾಲ್ಟ್‌ ಲೇಕ್​ನಲ್ಲಿ ಅಮಿತ್‌ ‌ಶಾ ದುರ್ಗಾಪೂಜೆಗೆ ಚಾಲನೆ ನೀಡಿದ್ದರು. ಇದೇ ಕಾರಣಕ್ಕೆ ಕಮಿಟಿಯವರು ಮತ್ತು ಸುತ್ತಮುತ್ತಲಿನ ಜನ ಇಬ್ಭಾಗವಾಗಿದ್ದರು. ಆದ್ರೆ ಈ ಬಾರಿ ಬಿಜೆಪಿಯವರೇ ದುರ್ಗಾ ಪೂಜೆ ಆಯೋಜಿಸಲು ಮುಂದಾಗಿದ್ದಾರೆ. ಅಲ್ಲದೆ ಪ್ರಧಾನಿ ಮೂಲಕ ಅದನ್ನು ಉದ್ಘಾಟಿಸಲು ನಿರ್ಧರಿಸಿದ್ದಾರೆ. ಅಕ್ಟೋಬರ್ 22ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಈಗಾಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ 69 ದುರ್ಗಾಪೂಜೆ ಪೆಂಡಲ್​ಗಳನ್ನ ಉದ್ಘಾಟಿಸಿದ್ದಾರೆ.

ಅಂದ್ಹಾಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿತ್ತು. ಹೀಗಾಗಿ ಆಡಳಿತ ಪಕ್ಷ ಟಿಎಂಸಿ ಮತ್ತು ಎಡಪಕ್ಷಗಳ ನಡುವಿನ ಯುದ್ಧ ಈಗ ಟಿಎಂಸಿ v/s ಬಿಜೆಪಿಯಾಗಿ ಪರಿವರ್ತನೆಯಾಗಿದೆ. ಮಮತಾ ಬ್ಯಾನರ್ಜಿ ಕೋಟೆಯನ್ನ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ರೆ, ಕೋಟೆಯನ್ನು ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿ ಹರಸಾಹಸ ಪಡುತ್ತಿದ್ದಾರೆ.

-masthmagaa.com

Contact Us for Advertisement

Leave a Reply