ಫೆ. 22ಕ್ಕೆ ಪುದುಚೆರಿ ವಿಶೇಷ ಅಧಿವೇಶನ! ಕಾಂಗ್ರೆಸ್​​​ಗೆ ಅಗ್ನಿಪರೀಕ್ಷೆ

masthmagaa.com:

ಪುದುಚೆರಿ: ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ರಾಜಕೀಯ ಜೋರಾಗಿದೆ. ಸದ್ಯ ವಿಧಾನಸಭೆ ಕಾರ್ಯದರ್ಶಿ ಆರ್.ಮೌನಿಸಾಮಿ ಫೆಬ್ರವರಿ 22ರಂದು ವಿಶೇಷ ಅಧಿವೇಶನ ಕರೆದಿದ್ದಾರೆ. ಇದೇ ವೇಳೆ ನೂತನ ಲೆಫ್ಟಿನೆಂಟ್ ಗವರ್ನರ್ ತಮಿಲಿಸೈ ಸೌಂದರರಾಜನ್ ಕಾಂಗ್ರೆಸ್​​​ಗೆ ವಿಶ್ವಾಸ ಮತಯಾಚನೆಯ ಶಾಕ್ ಕೊಟ್ಟಿದ್ದಾರೆ. ಫೆಬ್ರವರಿ 22ರ ಸಂಜೆ 5 ಗಂಟೆ ಒಳಗಾಗಿ ಬಹುಮತ ಸಾಬೀತುಪಡಿಸುವಂತೆ ತಾಕೀತು ಮಾಡಿದ್ದಾರೆ.

ಕಳೆದೊಂದು ತಿಂಗಳಲ್ಲಿ ನಾಲ್ವರು ಶಾಸಕರು ರಾಜೀನಾಮೆ ನೀಡಿರೋದ್ರಿಂದ ಕಾಂಗ್ರೆಸ್​​​​ಗೆ ಬಹುಮತ ಇಲ್ಲ.. ಪುದುಚೆರಿ ವಿಧಾನಸಭೆಯಲ್ಲಿ ಒಟ್ಟು 30 ಸ್ಥಾನ ಇದ್ದು, ಮೂವರು ನಾಮಾಕಿಂತ ಸದಸ್ಯರಿದ್ಧಾರೆ. ಅಧಿಕಾರಕ್ಕೆ 16 ಸ್ಥಾನ ಬೇಕು.. ಕಾಂಗ್ರೆಸ್ 15 ಸ್ಥಾನ ಗೆದ್ದಿತ್ತು. ಜೊತೆಗೆ ಡಿಎಂಕೆಯ ಇಬ್ಬರು ಶಾಸಕರು ಬೆಂಬಲ ನೀಡಿದ್ದರಿಂದ ಕಾಂಗ್ರೆಸ್ ಸರ್ಕಾರ ರಚಿಸಿ, ನಾರಾಯಣ ಸ್ವಾಮಿ ಸಿಎಂ ಆಗಿದ್ರು. ಆದ್ರೀಗ ನಾಲ್ವರು ಶಾಸಕರು ರಾಜೀನಾಮೆ ನೀಡಿದ್ದು, ಒಬ್ಬರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಪಕ್ಷದಿಂದ ತೆಗೆದು ಹಾಕಲಾಗಿದೆ. ಹೀಗಾಗಿ ಕಾಂಗ್ರೆಸ್​​​​​​​​​​​​​ ಶಾಸಕರ ಸಂಖ್ಯೆ 10ಕ್ಕೆ ಕುಸಿದಿದೆ.

-masthmagaa.com

Contact Us for Advertisement

Leave a Reply