ರಷ್ಯಾದ ಸ್ಪೋಟಕವನ್ನ ಹೊಡೆದುರುಳಿಸಿದ್ದೇವೆ ಅಂದ ಯುಕ್ರೇನ್!

masthmagaa.com:

ರಷ್ಯಾ ಯುದ್ದದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ರಷ್ಯಾದ ಒಳಗೆ Tu-22M3 ಹೆಸರಿನ ಲಾಂಗ್‌ ರೆಂಜ್‌ ಸ್ಟ್ರಾಟರ್ಜಿಕ್‌ ಸ್ಪೋಟಕ(ಬಾಂಬರ್)ವೊಂದನ್ನ ಹೊಡೆದುರಿಳಿಸಿದ್ದೇವೆ ಅಂತ ಯುಕ್ರೇನ್‌ ಮಿಲಟರಿ ಹೇಳಿದೆ. ಈ ಬಾಂಬರ್‌ನ್ನ, ಯುಕ್ರೇನ್‌ ಸಿಟಿಗಳ ಮೇಲೆ ದಾಳಿ ನಡೆಸಲು ರಷ್ಯಾ ಬಳಸ್ತಿತ್ತು. ಆದ್ರೆ ನಮ್ಮ ಯೋಧರು ಅದನ್ನ ಹಿಮ್ಮೆಟ್ಟಿಸಿ, ಒಟ್ಟು 29 ಏರಿಯಲ್‌ ಟಾರ್ಗೆಟ್‌ಗಳನ್ನ ಹೊಡೆದುರುಳಿಸಿದ್ದಾರೆ ಅಂತ ತಿಳಿಸಿದೆ. ಇನ್ನು ಈ ವಿಚಾರವಾಗಿ ರಷ್ಯಾ ಪ್ರತಿಕ್ರಿಯೆ ನೀಡಿದ್ದು, ಘಟನೆಯಲ್ಲಿ ವಿಮಾನ ಸಿಬ್ಬಂದಿ ಮೃತಪಟ್ಟಿದ್ದು, ಮತ್ತೊಬ್ರು ಮಿಸ್‌ ಆಗಿದ್ದಾರೆʼ ಅಂತೇಳಿದೆ. ಇನ್ನೊಂದ್ಕಡೆ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ನ್ಯಾಟೋಗೆ ನೀವು ನಿಜವಾಗ್ಲೂ ನಮ್ಮ ಫ್ರೆಂಡ್‌ ಹೌದಾ ಅಂತ ಕಿಡಿಕಾರಿದ್ದಾರೆ.ʻರಷ್ಯಾ ಜೊತೆಗಿನ ಯುದ್ಧದಲ್ಲಿ ಒದ್ದಾಡ್ತಿರೋ ನಮ್ಮ ಸೇನಾ ಪಡೆಗೆ ಸಪೋರ್ಟ್‌ ಮಾಡಿ. ಶಸ್ತ್ರಾಸ್ತ್ರಗಳ ಸಪ್ಲೈ ಮಾಡಿʼ ಅಂತ ನ್ಯಾಟೋ ರಾಷ್ಟ್ರಗಳ ರಕ್ಷಣಾ ಸಚಿವರಿಗೆ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply