ಮಕ್ಕಳ ಮೇಲೆ ಕೊರೋನಾಗೆ ಯಾಕೆ ಲವ್..?

masthmagaa.com:

ಕೊರೋನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಸೋಂಕು.. ಇದು ಹೆಚ್ಚಾಗಿ ವೃದ್ಧರು ಮತ್ತು ವಯಸ್ಕರನ್ನು ಹಿಂಡಿ ಹಿಪ್ಪೆ ಮಾಡಿದೆಯೇ ಹೊರತು ಮಕ್ಕಳ ತಂಟೆಗೆ ಅಷ್ಟಾಗಿ ಹೋಗಿಲ್ಲ.. ಇದೀಗ ವಿಜ್ಞಾನಿಗಳು ಕಾರಣ ಕಂಡು ಹಿಡಿದಿದ್ದಾರೆ.. ಕೊರೋನಾ ಮಕ್ಕಳ ಮೇಲೆ ಪ್ರೀತಿಯಿಂದ ಅವರನ್ನು ಬಿಟ್ಟಿಲ್ಲ.. ಅದಕ್ಕೆ ಕಾರಣ ಸೆಲ್ ರಿಸೆಪ್ಟರ್ಸ್​​​ಗಳು..ಮಕ್ಕಳಲ್ಲಿ ಸೆಲ್ ರಿಸೆಪ್ಟರ್ಸ್​​​ಗಳು ಅದ್ರಲ್ಲೂ ಕೊರೋನಾಗೆ ಹೊಂದಿಕೆಯಾಗುವ ಸೆಲ್ ರಿಸೆಪ್ಟರ್ಸ್​​ಗಳ ಪ್ರಮಾಣ ಕಡಿಮೆ ಇದೆ.. ಹೀಗಾಗಿ ಕೊರೋನಾ ಮಕ್ಕಳ ಮೇಲೆ ಪ್ರಭಾವ ಬೀರೋಕೆ ಆಗಿಲ್ಲ ಅನ್ನೋದು ಗೊತ್ತಾಗಿದೆ.

ಏನಿದು ಸೆಲ್ ರಿಸೆಪ್ಟರ್ಸ್​​..?

ಸೆಲ್ ರಿಸೆಪ್ಟರ್ಸ್ ಅಂದ್ರೆ ಕೊರೋನಾಗೆ ಕೊಂಬುಗಳಿವೆಯಲ್ವಾ..? ಅದೇ ರೀತಿ ಜೀವ ಕೋಶಗಳಲ್ಲಿ ಜೀವ ಕೋಶಗಳಿಗೆ ಬೇಕಾದ ಅಂಶಗಳನ್ನು ಹೀರಿಕೊಳ್ಳಲು ಇರುವ ಒಂದು ರಚನೆ.. ಈ ಕೊರೋನಾದ ದೇಹದ ಒಳಗೆ ಹೋದ ಬಳಿಕ ಅದರಲ್ಲಿರೋ ಕೊಂಬುಗಳು ಹೋಗಿ ಸೆಲ್ ರಿಸೆಪ್ಟರ್ಸ್​​ಗಳಿಗೆ ತಾಗಿ, ಲಾಕ್ ಆಗಿ ಜೀವ ಕೋಶವನ್ನು ಪ್ರವೇಶಿಸುತ್ತವೆ. ಈ ಮೂಲಕ ತಮ್ಮ ಕಾರ್ಯಾಚರಣೆ ಶುರು ಮಾಡುತ್ತವೆ.. ಆದ್ರೆ ಮಕ್ಕಳಲ್ಲಿ ಕೊರೋನಾಗೆ ಹೊಂದಿಕೆಯಾಗುವಂತಹ ಸೆಲ್ ರಿಸೆಪ್ಟರ್ಸ್​​ಗಳು ಇಲ್ಲ. ಹೀಗಾಗಿ ಕೊರೋನಾ ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರಿಲ್ಲ ಅಂತ ಸಂಶೋಧನೆಯಿಂದ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply