masth magaa:

ವಾರದ ಮೊದಲ ದಿನವಾದ ಸೋಮವಾರ ಸಂವೇದಿ ಸೂಚ್ಯಂಕ (Sensex​) 1,170 ಅಂಕಗಳ ಭಾರಿ ಇಳಿಕೆ ಕಂಡು 58,466ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 348 ಅಂಕ ಇಳಿಕೆ ಕಂಡು 17,417 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 10 ಪೈಸೆ ಕುಸಿದು 74.40 ಆಗಿದೆ (74 ರೂಪಾಯಿ 40 ಪೈಸೆ).

ಒಂದ್ಕಡೆ ಷೇರುಪೇಟೆ ಕುಸಿದ್ರೆ, ಮತ್ತೊಂದುಕಡೆ ಚಿನ್ನ-ಬೆಳ್ಳಿ ದರ ಕೂಡ ಸೋಮವಾರ ಕುಸಿತ ಕಂಡಿದೆ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 401 ರೂಪಾಯಿ ಕಮ್ಮಿಯಾಗಿ ₹48,834 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 248 ರೂಪಾಯಿ ಕಮ್ಮಿಯಾಗಿ ₹44,837 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 657 ರೂಪಾಯಿ ಕಮ್ಮಿಯಾಗಿ 65,829 ಆಗಿದೆ. ಈ ಎಲ್ಲಾ ದರಗಳು 3% ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರೋದಿಲ್ಲ.

-masthmagaa.com

 

 

Contact Us for Advertisement

Leave a Reply