masth magaa.com:

ವಾರದ ಮೊದಲ ದಿನವೇ ಸಾವಿರಕ್ಕೂ ಹೆಚ್ಚು ಅಂಕ ಕುಸಿದಿದ್ದ ಸಂವೇದಿ ಸೂಚ್ಯಂಕ (Sensex), ಮಂಗಳವಾರ ಅಲ್ಪ ಚೇತರಿಕೆ ಕಂಡಿದೆ. 198 ಅಂಕ ಏರಿಕೆ ಕಂಡ ಸಂವೇದಿ ಸೂಚ್ಯಂಕ 58,664ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 87 ಅಂಕ ಏರಿಕೆ ಕಂಡು 17,503 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 3 ಪೈಸೆ ಕುಸಿತ ಕಂಡು 74.42 (74 ರೂಪಾಯಿ 42 ಪೈಸೆ) ಆಗಿದೆ.

ಇನ್ನು ಚಿನ್ನ ಮತ್ತು ಬೆಳ್ಳಿ ವಿಚಾರಕ್ಕೆ ಬಂದ್ರೆ, ಮಂಗಳವಾರ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 1,008 ರೂಪಾಯಿ ಕಮ್ಮಿಯಾಗಿ ₹47,826 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 923 ರೂಪಾಯಿ ಕಮ್ಮಿಯಾಗಿ ₹43,809 ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆ 2,048 ರೂಪಾಯಿ ಕಮ್ಮಿಯಾಗಿ 63,781 ಆಗಿದೆ. ಈ ಎಲ್ಲಾ ದರಗಳು 3% ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರೋದಿಲ್ಲ.

-masthmagaa.com

Contact Us for Advertisement

Leave a Reply