ಇಟಲಿಯಲ್ಲಿ ಕೊರೋನಾ ಅಟ್ಟಹಾಸ..ಶೌಚಾಲಯದಲ್ಲಿ ಶವ ಪತ್ತೆ

masthmagaa.com:

ಇಟಲಿ: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹಾವಳಿ ಕಡಿಮೆಯಾಗ್ತಿದೆ. ಆದ್ರೆ ಇಟಲಿಯಲ್ಲಿ ಮಾತ್ರ ಮತ್ತೆ ಕೊರೋನಾ ಹಾವಳಿ ಶುರುವಾಗಿದೆ. ಸದ್ಯ ವಿಡಿಯೋವೊಂದು ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಶೌಚಾಲಯವೊಂದರಲ್ಲಿ ಕೊರೋನಾ ಪೀಡಿತರೊಬ್ಬರ ಶವ ಪತ್ತೆಯಾಗಿದೆ. ಇವರು ಕೊರೋನಾ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ರು. ಈ ವೇಳೆ ಚಿಕಿತ್ಸೆಗೆ ಕಾಯುತ್ತಲೇ ಶೌಚಾಲಯಕ್ಕೆ ತೆರಳಿದ್ದ ಅವರು ಸಾವನ್ನಪ್ಪಿದ್ರು.. ಅವರಂತೆಯೇ ಚಿಕಿತ್ಸೆಗೆ ಬಂದಿದ್ದ ಮತ್ತೋರ್ವ ಕೊರೋನಾ ಪೀಡಿತ ಈ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಟಲಿ ವಿದೇಶಾಂಗ ಸಚಿವ ಲುಗಿ ಡಿ ಮೌವೋ, ಹಲವು ಪ್ರದೇಶಗಳಲ್ಲಿ ಕೊರೋನಾ ಕೈಮೀರಿ ಹೋಗ್ತಾ ಇದೆ. ನೇಪಲ್ಸ್ ಮತ್ತು ಕ್ಯಾಂಪೇನಿಯಾದಲ್ಲಿ ಸ್ಥಿತಿ ತುಂಬಾ ಕೆಟ್ಟದಾಗಿದೆ. ಕೂಡಲೇ ಸರ್ಕಾರ ವೈದ್ಯರು ಮತ್ತು ನರ್ಸ್​​ಗಳ ಸಹಾಯಕ್ಕೆ ಸೇನೆಯನ್ನು ಕರೆಸಿಕೊಳ್ಳಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply