ದಾಖಲೆ ಬಿಡುಗಡೆ ಮಾಡಿ ರಾಜ್ಯ ಸರ್ಕಾರಕ್ಕೆ ಗುದ್ದು ಕೊಟ್ಟ ಸಿದ್ದು..!

masthmagaa.com:

ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಅಂತ ಈ ಹಿಂದೆ ಆರೋಪ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇವತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನ ಬಿಡುಗಡೆ ಮಾಡಿದ್ರು. ಈ ವೇಳೆ ಮಾತನಾಡಿದ ಅವರು, ನನ್ನ ಆರೋಪವನ್ನು ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ನಯವಾಗಿ ತಳ್ಳಿ ಹಾಕಿದ್ರು. ಇತ್ತೀಚೆಗಷ್ಟೇ ರಾಜ್ಯದ ಜನರನ್ನುದ್ದೇಶಿಸಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ನನ್ನ ಆರೋಪವನ್ನು ತಳ್ಳಿ ಹಾಕಿದ್ರು.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಏನಾದ್ರೂ ಅವ್ಯವಹಾರ ನಡೆದಿದ್ರೆ 24 ಗಂಟೆಯಲ್ಲಿ ಮಾಹಿತಿ ಕೊಡ್ತೀವಿ ಎಂದಿದ್ದಾರೆ. ಆದ್ರೆ ನಾನು ಜೂನ್​ 9ರಿಂದ ಇವತ್ತಿನವರೆಗೆ 20 ಬಾರಿ ಪತ್ರ ಬರೆದಿದ್ದೀನಿ. ಆದ್ರೆ ಇವತ್ತಿನವರೆಗೆ ನನ್ನ ಯಾವುದೇ ಪತ್ರಕ್ಕೆ ಉತ್ತರ ಕೊಟ್ಟಿಲ್ಲ. ನಿಮಗೆ ಪ್ರಾಮಾಣಿಕತೆ ಇದ್ದಿದ್ರೆ ಕೂಡಲೇ ರಾಜ್ಯದ ಜನರ ಮುಂದೆ ಸತ್ಯವನ್ನು ಹೇಳಬೇಕಿತ್ತು.

ವಿಪಕ್ಷದವರು ಸಹಕರಿಸಬೇಕು ಅಂತ ಮುಖ್ಯಮಂತ್ರಿಗಳು ಮನವಿ ಮಾಡಿದ್ದರು. ಜನರ ಜೀವ ಉಳಿಸಲು ನಮ್ಮ ಸಹಕಾರ ಇರುತ್ತೆ. ಆದ್ರೆ ಕೊರೋನಾ ಸಂದರ್ಭದಲ್ಲಿ ಲೂಟಿ ಹೊಡೆಯಲು ಹೊರಟಿದ್ದೀರಲಾ ನಿಮಗೆ ಸಹಕಾರ ಕೊಡಬೇಕಾ..? ಹೇಳಿ ಯಡಿಯೂರಪ್ಪನವರೇ..? ಲೂಟಿ ಹೊಡೆಯೋದು ಜನ ದ್ರೋಹ. ಇದನ್ನ ರಾಜ್ಯದ ಜನರಿಗೆ ಹೇಳಲಿಲ್ಲ ಅಂದ್ರೆ ನಾವು ಜನದ್ರೋಹಿಗಳಾಗುತ್ತೇವೆ.

ಅಶ್ವತ್ಥ್​ ನಾರಾಯಣ ಮತ್ತು ಶ್ರೀರಾಮುಲು ಅವರು ಕೇವಲ 324 ಕೋಟಿ ರೂ. ಮಾತ್ರ ಖರ್ಚು ಮಾಡಿದ್ದೇವೆ ಅಂತ ಹೇಳಿದ್ದಾರೆ. ನನ್ನ ದಾಖಲೆ ಪ್ರಕಾರ ರಾಜ್ಯ ಸರ್ಕಾರ ಬರೋಬ್ಬರಿ 4,167 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದರಲ್ಲಿ 2,000 ಕೋಟಿ ರೂಪಾಯಿ ಸಚಿವರು ಮತ್ತು ಅಧಿಕಾರಿಗಳ ಜೇಬಿಗೆ ಹೋಗಿದೆ ಅಂತ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ರು. ಈ ಸಂಬಂಧ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿ ನಿಮ್ಮ ಬಳಿ ದಾಖಲೆ ಇದ್ರೆ ರಾಜ್ಯದ ಜನತೆಗೆ ತೋರಿಸಿ ಅಂತ ಚಾಲೆಂಜ್ ಹಾಕಿದ್ರು.

-masthmagaa.com

Contact Us for Advertisement

Leave a Reply