masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 62,064 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು 1,007 ಸೋಂಕಿತರು ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಬರೋಬ್ಬರಿ 22.15 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 44,386 ಆಗಿದೆ. 

ಕಳೆದ 24 ಗಂಟೆಗಳಲ್ಲಿ 54,000+ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 15.35 ಲಕ್ಷ ಸೋಂಕಿತರು ಗುಣಮುಖರಾಗಿದ್ದು, 6.34 ಲಕ್ಷ ಸೋಂಕಿತರು ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಗುಣಮುಖ ಪ್ರಮಾಣ 69.33% ಇದ್ದು, ಸಾವಿನ ಪ್ರಮಾಣ 2% ಇದೆ. ಆಗಸ್ಟ್​ 9ರಂದು 4.77 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 2.45 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ತಿಳಿಸಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 1.45 ಲಕ್ಷ ಪ್ರಕರಣ (17,000+ ಸಾವು)

2. ಆಂಧ್ರಪ್ರದೇಶ: 87,000+ ಪ್ರಕರಣ (2,000+ ಸಾವು)

3. ಕರ್ನಾಟಕ: 80,000+ ಪ್ರಕರಣ (3,100+ ಸಾವು)

4. ತಮಿಳುನಾಡು: 53,000+ ಪ್ರಕರಣ (4,900+ ಸಾವು)

5. ಉತ್ತರಪ್ರದೇಶ: 47,000+ ಪ್ರಕರಣ (2,000+ ಸಾವು)

6. ಬಿಹಾರ: 27,000+ ಪ್ರಕರಣ (387 ಸಾವು)

7. ಪಶ್ಚಿಮ ಬಂಗಾಳ: 26,000+ ಪ್ರಕರಣ (2,000+ ಸಾವು)

8. ತೆಲಂಗಾಣ: 22,000+ ಪ್ರಕರಣ (637 ಸಾವು)

9. ಅಸ್ಸಾಂ: 16,000+ ಪ್ರಕರಣ (145 ಸಾವು)

10. ಗುಜರಾತ್: 14,000+ ಪ್ರಕರಣ (2,600+ ಸಾವು)

ದೇಶದಲ್ಲಿ ಕಳೆದ ವಾರ ದಾಖಲೆಯ 4.10 ಲಕ್ಷ ಜನರಿಗೆ ಸೋಂಕು ದೃಢಪಟ್ಟಿದೆ. ಇದು ಅಮೆರಿಕ, ಬ್ರೆಜಿಲ್​ಗಿಂತಲೂ ಹೆಚ್ಚು. ಕಳೆದ ವಾರ ಭಾರತದಲ್ಲಿ 6,279 ಸೋಂಕಿತರು ಮೃತಪಟ್ಟಿದ್ದಾರೆ.

ಜುಲೈ 20-26: 3.20 ಲಕ್ಷ ಪ್ರಕರಣ (4,871 ಸಾವು)

ಜು. 27 – ಆ. 2: 3.70 ಲಕ್ಷ ಪ್ರಕರಣ (5,345 ಸಾವು)

ಆಗಸ್ಟ್​ 3 -9: 4.10 ಲಕ್ಷ ಪ್ರಕರಣ (6,279 ಸಾವು)

-masthmagaa.com

Contact Us for Advertisement

Leave a Reply