masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 29,429‬ ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ನಿನ್ನೆ 28,498.. ಇವತ್ತು 29,429.. ದೇಶದಲ್ಲಿ ಸೋಂಕು ಕಾಣಿಸಿಕೊಂಡಾಗಿನಿಂದ ಒಂದೇ ದಿನದಲ್ಲಿ ದೃಢಪಟ್ಟ ಅತಿ ಹೆಚ್ಚು ಪ್ರಕರಣ ಇದಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9,36,181 ಆಗಿದೆ.

ಇನ್ನು ಕಳೆದ 24 ಗಂಟೆಗಳಲ್ಲಿ 582 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 24,309 ಆಗಿದೆ. ಕಳೆದ 24 ಗಂಟೆಗಳಲ್ಲಿ 20,572 ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು 5,92,032 ಸೋಂಕಿತರು ಗುಣಮುಖರಾದಂತಾಗಿದೆ. ಗುಣಮುಖ ಪ್ರಮಾಣ ಶೇ. 63.20ರಷ್ಟು ಇದೆ. 3,19,840 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಒಂದೇ ದಿನ 87 ಸೋಂಕಿತರು ಸಾವು.. 4ನೇ ಸ್ಥಾನಕ್ಕೆ ಕರ್ನಾಟಕ

ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಬರೋಬ್ಬರಿ 2.67 ಲಕ್ಷ ದಾಟಿದೆ. ತಮಿಳುನಾಡಿನಲ್ಲಿ 1.47 ಲಕ್ಷ ಮತ್ತು ದೆಹಲಿಯಲ್ಲಿ 1.15 ಲಕ್ಷ ದಾಟಿದೆ. ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ ಗುಜರಾತ್ ಮೀರಿಸಿರೋ ಕರ್ನಾಟಕ 4ನೇ ಸ್ಥಾನಕ್ಕೆ ಬಂದಿದೆ.

ದೇಶದಲ್ಲಿ ನಿನ್ನೆ ದಾಖಲೆಯ 3,20,161 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 1.24 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ ಅಂತ ಐಸಿಎಂಆರ್ ತಿಳಿಸಿದೆ.

ಕೊರೋನಾ ಪೀಡಿತ ಟಾಪ್​-5 ರಾಜ್ಯಗಳು:

1. ಮಹಾರಾಷ್ಟ್ರ: 2,67,665 ಪ್ರಕರಣ (10,695 ಸಾವು)

2. ತಮಿಳುನಾಡು: 1,47,324 ಪ್ರಕರಣ (2,099 ಸಾವು)

3. ದೆಹಲಿ: 1,15,346 ಪ್ರಕರಣ (3,446 ಸಾವು)

4. ಕರ್ನಾಟಕ: 44,077 ಪ್ರಕರಣ (842 ಸಾವು)

5. ಗುಜರಾತ್: 43,637 ಪ್ರಕರಣ (2,069 ಸಾವು)

-masthmagaa.com
Contact Us for Advertisement

Leave a Reply