ದೇಶದಲ್ಲಿ ನಿಲ್ಲುತ್ತಿಲ್ಲ ಕೊರೋನಾ ಹಾವಳಿ, ಒಂದೇ ದಿನ 587 ಸೋಂಕಿತರು ಬಲಿ

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 37,148 ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ನಿನ್ನೆ ದಾಖಲೆಯ 40,425.. ಇವತ್ತು 37,148.. ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಬರೋಬ್ಬರಿ 11,55,191 ಆಗಿದೆ.

ಕಳೆದ 24 ಗಂಟೆಗಳಲ್ಲಿ 587 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 28,084 ಆಗಿದೆ. ಇದುವರೆಗೆ ಒಟ್ಟು 7,24,578 ಸೋಂಕಿತರು ಗುಣಮುಖರಾದಂತಾಗಿದ್ದು 4,02,529 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ನಿನ್ನೆ 3.33 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 1.43 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ಹೇಳಿದೆ.

ಕೊರೋನಾ ಪೀಡಿತ ಟಾಪ್​-5 ರಾಜ್ಯಗಳು:

1. ಮಹಾರಾಷ್ಟ್ರ: 3,18,695 ಪ್ರಕರಣ (12,030 ಸಾವು)

2. ತಮಿಳುನಾಡು: 1,75,678 ಪ್ರಕರಣ (2,551 ಸಾವು)

3. ದೆಹಲಿ: 1,23,747 ಪ್ರಕರಣ (3,663 ಸಾವು)

4. ಕರ್ನಾಟಕ: 67,420 ಪ್ರಕರಣ (1,403 ಸಾವು)

5. ಆಂಧ್ರಪ್ರದೇಶ: 53,724 ಪ್ರಕರಣ (696 ಸಾವು)

-masthmagaa.com

Contact Us for Advertisement

Leave a Reply