ದೇಶದಲ್ಲಿ 3 ಕೋಟಿ ಕೊರೋನಾ ಪರೀಕ್ಷೆ.. 100ರಲ್ಲಿ ಎಷ್ಟು ಪಾಸಿಟಿವ್ ಬರ್ತಿದೆ ಗೊತ್ತಾ?

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 57,982 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು 941 ಸೋಂಕಿತರು ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 26.47 ಲಕ್ಷ ಆಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 50 ಸಾವಿರ ಗಡಿ ದಾಟಿದ್ದು 50,921 ಆಗಿದೆ. 

ಕಳೆದ 24 ಗಂಟೆಗಳಲ್ಲಿ 57,000+ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 19.19 ಲಕ್ಷ ದಾಟಿದ್ದು, 6.76 ಲಕ್ಷ ಸೋಂಕಿತರು ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 72.51% ಇದ್ದು, ಸಾವಿನ ಪ್ರಮಾಣ 1.92% ಇದೆ. ಆಗಸ್ಟ್​ 16ರಂದು ದೇಶದಲ್ಲಿ 7.31 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ 3 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ತಿಳಿಸಿದೆ.

3 ಕೋಟಿ ಕೊರೋನಾ ಪರೀಕ್ಷೆಯಲ್ಲಿ ಇದುವರೆಗೆ 26.47 ಲಕ್ಷ ಜನರಿಗೆ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಪಾಸಿಟಿವಿಟಿ ರೇಟ್ 8.84% ರಷ್ಟಿದೆ. ಅಂದ್ರೆ 100 ಜನರಿಗೆ ಕೊರೋನಾ ಪರೀಕ್ಷೆ ನಡೆಸಿದಾಗ 8 ಜನರಿಗೆ ಪಾಸಿಟಿವ್ ಬರ್ತಿದೆ ಅಂತ ಅರ್ಥ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 1.58 ಲಕ್ಷ ಪ್ರಕರಣ (20,000+ ಸಾವು)

2. ಆಂಧ್ರಪ್ರದೇಶ: 85,000+ ಪ್ರಕರಣ (2,600+ ಸಾವು)

3. ಕರ್ನಾಟಕ: 81,000+ ಪ್ರಕರಣ (3,900+ ಸಾವು)

4. ತಮಿಳುನಾಡು: 54,000+ ಪ್ರಕರಣ (5,700+ ಸಾವು)

5. ಉತ್ತರಪ್ರದೇಶ: 51,000+ ಪ್ರಕರಣ (2,400+ ಸಾವು)

6. ಬಿಹಾರ: 31,000+ ಪ್ರಕರಣ (461 ಸಾವು)

7. ಪಶ್ಚಿಮ ಬಂಗಾಳ: 27,000+ ಪ್ರಕರಣ (2,400+ ಸಾವು)

8. ತೆಲಂಗಾಣ: 21,000+ ಪ್ರಕರಣ (703 ಸಾವು)

9. ಅಸ್ಸಾಂ: 21,000+ ಪ್ರಕರಣ (189 ಸಾವು)

10. ಒಡಿಶಾ: 17,000+ ಪ್ರಕರಣ (343 ಸಾವು)

-masthmagaa.com

Contact Us for Advertisement

Leave a Reply